ಶಾಸಕ ವಿ.ಸುನಿಲ್ ಕುಮಾರ್ ರವರಿಂದ ಅಭಿನಂದನೆ

ಕಾರ್ಕಳ: ಕಾರ್ಕಳದ ಹೆಮ್ಮೆಯ ಕುವರಿ ಅಕ್ಷತಾ ಪೂಜಾರಿ ಬೋಳ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಷ್ಯಾ ಫೆಸಿಪಿಕ್ ಆಫ್ರಿಕನ್ ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್ಶಿಪ್ ಸೀನಿಯರ್ಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ , ಚಿನ್ನದ ಸಾಧನೆಯನ್ನು ತನ್ನದಾಗಿಸಿಕೊಂಡಿದ್ದಾರೆ.
ಇಂದು ಅಕ್ಷತಾ ಪೂಜಾರಿ ಬೋಳ ಇವರ ಸಾಧನೆಗಾಗಿ, ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ತಮ್ಮ ಕಚೇರಿಯಲ್ಲಿ ಅಭಿನಂದಿಸಿದರು.





