31 C
Udupi
Tuesday, December 2, 2025
spot_img
spot_img
HomeBlogಭಾರತದ ಪ್ರಮುಖ ಕಂಪನಿ ಪತಂಜಲಿ ತಯಾರಿಸಿರುವ ತುಪ್ಪದ ಗುಣಮಟ್ಟ ವಿಫಲ..!

ಭಾರತದ ಪ್ರಮುಖ ಕಂಪನಿ ಪತಂಜಲಿ ತಯಾರಿಸಿರುವ ತುಪ್ಪದ ಗುಣಮಟ್ಟ ವಿಫಲ..!

ಭಾರಿ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ

ಪಿತೋರ್ ಗಢ: ರಾಷ್ಟ್ರ ಹಾಗೂ ರಾಜ್ಯದ ಪ್ರಯೋಗಾಲಯಗಳು ನಡೆಸಿದ ತುಪ್ಪದ ಗುಣಮಟ್ಟ ಪರೀಕ್ಷೆಯಲ್ಲಿ ಭಾರತದ ಪ್ರಮುಖ ಕಂಪನಿ ಪತಂಜಲಿ ತಯಾರಿಸಿರುವ ತುಪ್ಪದ ಮಾದರಿ ಗುಣಮಟ್ಟ ವಿಫಲವಾಗಿದ್ದು ಅಲ್ಲದೆ ತುಪ್ಪ ಕಲಬೆರಿಕೆಯಾಗಿರುವುದು ಬೆಳಕಿಗೆ ಬಂದಿದ್ದು ಈ ಹಿನ್ನಲೆಯಲ್ಲಿ ಉತ್ತರಾಖಂಡದ ಸ್ಥಳೀಯ ನ್ಯಾಯಾಲಯವು ಪತಂಜಲಿ ಕಂಪನಿಗೆ ಒಟ್ಟು 140ಲಕ್ಷ ರೂ. ಮೊತ್ತದ ದಂಡ ವಿಧಿಸಿದೆ.

ರಾಜ್ಯ ಪ್ರಯೋಗಾಲಯದ ಬಳಿಕ ಗಾಜಿಯಾಬಾದ್ ನಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯ ಕೂಡ ಉತ್ಪನ್ನ ಕಳಪೆ ಎಂದು ದೃಢಪಡಿಸಿದ್ದು ಇದು ಉತ್ಪಾದಕರು ಹಾಗೂ ಮಾರಾಟಗಾರರ ವಿರುದ್ಧದ ಪ್ರಕರಣಕ್ಕೆ ಪುಷ್ಟಿ ನೀಡಿತು. ನಂತರ ಆಹಾರ ಸುರಕ್ಷತಾ ಅಧಿಕಾರಿ ಪಿತೋರ್ ಗಢದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ವಾದ-ವಿವಾದಗಳನ್ನು ಆಲಿಸಿ ಹಾಗೂ ಸಾಕ್ಷಿಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಉತ್ಪಾದಕ ಪತಂಜಲಿ ಆಯುರ್ವೇದ ಲಿಮಿಟೆಡ್ ಗೆ 1 ಲಕ್ಷ ರೂಪಾಯಿ, ವಿತರಕ ಬ್ರಹ್ಮ ಆಕ್ಸೆಸೆರೀಸ್ ಗೆ 25 ಸಾವಿರ ರೂ. ಹಾಗೂ ಕರಣ್ ಜನರಲ್ ಸ್ಟೋರ್ ಗೆ 15 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page