32.1 C
Udupi
Tuesday, March 10, 2026
spot_img
spot_img
HomeBlogಬಟ್ಟೆ ,ಊಟ ,ಶೂ ಸೇರಿ ಹಲವು ಯೋಜನೆ ನೀಡಿದರೂ,

ಬಟ್ಟೆ ,ಊಟ ,ಶೂ ಸೇರಿ ಹಲವು ಯೋಜನೆ ನೀಡಿದರೂ,

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿತ: ಮಧು ಬಂಗಾರಪ್ಪ

ಬಿಜೆಪಿಯ ಹನುಮಂತ ನಿರಾಣಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕಳೆದ ಮೂರು ವರ್ಷದಲ್ಲಿ ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ. 11.20 ಆದಷ್ಟು ಕುಸಿದಿದೆ. ಇದಕ್ಕೆ ಕೆಪಿಎಸ್ ಶಾಲೆ ಆರಂಭ ಕಾರಣವಲ್ಲ. ಪೋಷಕರ ಇಂಗ್ಲಿಷ್ ಮಾಧ್ಯಮದ ಬಗ್ಗೆಗಿನ ಪ್ರೀತಿ, ಮತ್ತು ಕೇಂದ್ರ ಪಠ್ಯಕ್ರಮದ ವ್ಯಾಮೋಹ ಕಾರಣ ಎಂದಿದ್ದಾರೆ.

ಬಟ್ಟೆ, ಊಟ ,ಶೂ ಮುಂತಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದರು ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲು ಪ್ರವೇಶಾತಿ ಅಭಿಯಾನವನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ವಿಧಾನ ಪರಿಷತ್ ಸದಸ್ಯರೆಲ್ಲರೂ ಕೈಜೋಡಿಸಬೇಕು. ಸರ್ಕಾರಿ ಶಾಲೆಗಳಿಂದ ದೂರ ಹೋದವರನ್ನು ವಾಪಸ್ ಶಾಲೆಗೆ ಕರೆತರುವಂತೆ ಆಗಬೇಕು. ಶಾಸಕರು ತಮ್ಮ ಕ್ಷೇತ್ರದಲ್ಲಿರುವ ಮಕ್ಕಳನ್ನು ಕರೆತರಲು ನೆರವಾಗಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಇನ್ನು ದಾಖಲಾತಿ ಹೆಚ್ಚಿಸಲು 2025-26 ಸಾಲಿನವರೆಗೆ ಸರಕಾರಿ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿಗೆ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸಲು ಪೂರ್ವ, ಪ್ರಾಥಮಿಕ ಪದವಿಪೂರ್ವ ಶಿಕ್ಷಣದವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು ಸ್ಥಳಾವಕಾಶ ಮತ್ತು ಉತ್ತಮ ದಾಖಲಾತಿ ಹೊಂದಿರುವ ಆಯ್ದ ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page