
ಬಜಗೋಳಿ ಸೀಕ್ರೆಟ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿಯವರು ನೇಮಕಗೊಂಡಿದ್ದಾರೆ.
ಪ್ರಕಾಶ್ ಪೂಜಾರಿಯವರು ಜೇಸಿಐ ಅಲುಮಿನಿ ಕ್ಲಬ್ ವಲಯ 15ರ ಜೇಸಿಐ ರೀಜಿನಲ್ ಚ್ಯಾರ್‌ಮೆನ್, ಕೆರ್ವಾಶೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಗೋಪಾಲಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಕಿಶನ್ ಕಾಂಗ್ರೆಸ್ ನ ಕಾರ್ಯಾಧ್ಯಕ್ಷರಾಗಿ, ಕೆರ್ವಾಶೆ ಗ್ರಾಮದ ಬಿಲ್ಲವ ಸಮಾಜದ ಅಧ್ಯಕ್ಷ, ಯುವವಾಹಿನಿ ಕಾರ್ಕಳ ಘಟಕದ ಉಪಾಧ್ಯಕ್ಷ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರೀಯಾಶೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಬಜಗೋಳಿ ಸೀಕ್ರೆಟ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.



















































