
ಬಂಟ್ವಾಳ: ಮೇ 27ರಂದು ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಪಿಕಪ್ ವಾಹನ ಚಾಲಕನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ದುರ್ಘಟನೆ ನಡೆದಿದೆ.
ಕೊಳತ್ತಮಜಲು ನಿವಾಸಿ ಪಿಕಪ್ ವಾಹನ ಚಾಲಕನ ಸೋದರ ರಹೀಮ್ ಎಂಬಾತನನ್ನು ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಡಿದು ಎಸ್ಕೇಪ್ ಆಗಿದ್ದಾರೆ.
ಮಾತ್ರವಲ್ಲದೆ ರಹಿಮ್ ಜೊತೆ ಇದ್ದ ಇನ್ನೊಬ್ಬನನ್ನು ಕೂಡ ಕಡಿದಿದ್ದು ಆತನಿಗೆ ಕೈಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






















































