“ಪ್ರತಿಭಾ ಪುರಸ್ಕಾರ ಮತ್ತು ಆಟಿಡೊಂಜಿ ಕೆಸರ್ದ ಕೂಟ” ಕಾರ್ಯಕ್ರಮ
ಆ. 10 ಆದಿತ್ಯವಾರ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪೆರ್ವಾಜೆ

ದಿನಾಂಕ 10.08.2025ನೇ ಆದಿತ್ಯವಾರದಂದು ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು, ಕಾರ್ಕಳ ಹೆಬ್ರಿ ತಾಲೂಕು ಸಮಿತಿ, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ ಹಾಗೂ ಯುವ ಬಂಟರ ಸಂಘ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಪೆರ್ವಾಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಟಾರದಲ್ಲಿ “ಪ್ರತಿಭಾ ಪುರಸ್ಕಾರ” ಮತ್ತು “ಆಟಿಡೊಂಜಿ ಕೆಸರ್ದ ಕೂಟ” ಕಾರ್ಯಕ್ರಮ ನಡೆಯಲಿದೆ.
ಅಜಿತ್ ಕುಮಾರ್ ರೈ ಮಾಲಾಡಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಸಿ ಎ ಅಶೋಕ್ ಶೆಟ್ಟಿ ಎಂ ಅವರು ಉದ್ಘಾಟನೆ ಮಾಡಲಿದ್ದಾರೆ. ಶ್ರೀಮತಿ ಕಾಂತಿ ಶೆಟ್ಟಿ, ಉಮೇಶ್ ಕುಮಾರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಮುನಿಯಲು, ಶ್ರೀ ಗೋಪಾಲಕೃಷ್ಣ ಶೆಟ್ಟಿ, ಸುಜಯ್ ಕುಮಾರ್ ಶೆಟ್ಟಿ, ಮಣಿರಾಜ್ ಶೆಟ್ಟಿ, ಡಾ| ರವಿರಾಜ್ ಶೆಟ್ಟಿ, ಶ್ರೀಮತಿ ಬೃಂದಾ ಹರಿಪ್ರಕಾಶ್ ಶೆಟ್ಟಿ, ವಿಜಯ ಹೆಗ್ಡೆ, ನೀಲೇಶ್ ಶೆಟ್ಟಿ ಹಾಗೂ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಭುವನೇಂದ್ರ ಕಾಲೇಜಿನ ದೈಹಿಕ ಶಿಕ್ಷಕರಾದ ನವೀನ್ ಚಂದ್ರ ನಾಯಕ್ ಅವರಿಗೆ ಸನ್ಮಾನ ನಡೆಯಲಿದ್ದು, ಎಸ್ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ 90 ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 10ನೇ ರಾಂಕ್ ಒಳಗೆ ಬಂದವರಿಗೆ ವಿಶೇಷ ಸನ್ಮಾನ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ, ಮುಖ್ಯ ಅತಿಥಿಯಾಗಿ ಮಣಿರಾಜ್ ಶೆಟ್ಟಿ, ಸುನಿಲ್ ಕುಮಾರ್ ಶೆಟ್ಟಿ, ಡಾ. ರವಿರಾಜ್ ಶೆಟ್ಟಿ, ವೃಂದ ಹರಿಪ್ರಕಾಶ್ ಶೆಟ್ಟಿ, ಗಿರೀಶ್ ಶೆಟ್ಟಿ ಕುಡುಪುಲಾಜೇ ತೆಳ್ಳಾರು, ಬಾಲಕೃಷ್ಣ ಶೆಟ್ಟಿ ಹಿರಿಯಂಗಡಿ, ಜಿ.ವೆಂಕಪ್ಪ ಹೆಗ್ಡೆ, ವಿಜಯ್ ಹೆಗ್ಡೆ, ದಿನೇಶ್ ಶೆಟ್ಟಿ ಜಾರ್ಕಳ, ನೀಲೇಶ್ ಶೆಟ್ಟಿ ಮಂಗಳೂರು, ಇವರ ಉಪಸ್ಥಿತಿ ಇರಲಿದೆ.