
ಚಂಡೀಗಢ: ಮಹಿಳೆಯರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುವ ವರ್ತನೆಗಳ ವಿರುದ್ಧ ಚಂಡೀಗಢ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಫ್ಲೈಯಿಂಗ್ ಕಿಸ್ ಕೊಡುವುದು, ಕಣ್ಣು ಹೊಡೆಯುವುದು ಕೂಡ ಲೈಂಗಿಕ ಕಿರುಕುಳದೊಳಗೆ ಬರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
2021ರಲ್ಲಿ ಮಹಿಳೆ ಮನೆ ಮುಂದೆ ಕಸ ಗುಡಿಸುತ್ತಿದ್ದಾಗ ವ್ಯಕ್ತಿಯೋರ್ವ ಹಣದ ನೋಟು ಎಸೆದು ಫ್ಲೈಯಿಂಗ್ ಕಿಸ್ ಕೊಟ್ಟಿದ್ದ ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್, ಇದನ್ನು ಅಸಭ್ಯ ಹಾಗೂ ಕಿರುಕುಳಕರ ವರ್ತನೆ ಎಂದು ಪರಿಗಣಿಸಿದೆ. ಲೈಂಗಿಕ ಕಿರುಕುಳ ಎನ್ನುವುದು ಕೇವಲ ಸ್ಪರ್ಶದಿಂದಲೇ ಆಗಬೇಕೆಂದಿಲ್ಲ ಎಂದು ಹೇಳಿದ ಕೋರ್ಟ್ ಈ ಪ್ರಕರಣದಲ್ಲಿ ದೋಷಿಗೆ ₹10,000 ದಂಡ ಹಾಗೂ ₹20,000 ಪ್ರೊಬೇಷನ್ ಬಾಂಡ್ ವಿಧಿಸಲಾಗಿದೆ. ಮಹಿಳೆಯರ ಮೇಲೆ ಅಸಭ್ಯವಾಗಿ ವರ್ತಿಸುವವರಿಗೆ ಕಠಿಣ ಸಂದೇಶ ನೀಡುವ ತೀರ್ಪು ಇದಾಗಿದೆ.



















