ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ,ವಿಜೇತ ವಿಶೇಷ ಶಾಲೆ ಕಾರ್ಕಳ ಪ್ರಥಮ ಬಹುಮಾನ

ಫಸ್ಟ್ ಸ್ಟೆಪ್ ಟ್ರಸ್ಟ್ ರಿ. ಉಡುಪಿ ವತಿಯಿಂದ ನಡೆದ 4ನೇ ವರ್ಷದ ಹೆಜ್ಜೆ ಸಂಭ್ರಮ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿಜೇತ ವಿಶೇಷ ಶಾಲೆ ಅಯ್ಯಪ್ಪನಗರ ಕಾರ್ಕಳ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.
ಕಾರ್ಯಕ್ರಮದಲ್ಲಿ ಶಾಲಾ ಸಹಾಯಕ ಸಿಬ್ಬಂದಿ ರಮ್ಯಾಶ್ರೀ ಶೆಟ್ಟಿ ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಉತ್ತಮ ಅಭಿನಯದೊಂದಿಗೆ ಶಾಲೆಗೆ ಕೀರ್ತಿ ತಂದ ಹರ್ಷಿತಾ ಕಿರಣ್, ಯಮನಪ್ಪ, ಶ್ರೀನಿಧಿ, ನಳಿನಿ, ಸವಿತಾ ಸಿಬ್ಬಂದಿ ವರ್ಗದವರಿಗೆ ಹಾಗೂ ಎಲ್ಲಾ ಮಕ್ಕಳಿಗೆ ತರಬೇತುದಾರರಿಗೆ ಶಾಲಾವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.



















