ಸುಜಿತ್ ಸಪಲಿಗ,ತಾಲೂಕು ಸಂಯೋಜಕರು ಹಿಂದು ಜಾಗರಣ ವೇದಿಕೆ ಕಾರ್ಕಳ

ಕಾಂಗ್ರೆಸ್ನ ಮನಸ್ಥಿತಿಯೇ ಹಾಗೆ ಜಾತಿ ಜಾತಿ ಎಂಬ ಹೆಸರಿನಲ್ಲಿ ಎಲ್ಲಾ ಹಿಂದುಗಳನ್ನು ಒಡೆದ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ.
ಈಗ ನಮ್ಮ ಸುಸಂಸ್ಕೃತ ಆಚಾರ ವಿಚಾರಗಳನ್ನು ನಾಶಪಡಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನು ಹೇರುವ ಹೀನ ಕೃತ್ಯಕ್ಕೆ ಕೈ ಹಾಕಿ ಹಿಂದುಗಳಲ್ಲಿ ಇನ್ನಷ್ಟು ಒಡಕು ಮೂಡಿಸುವ ಪ್ರಯತ್ನ ನಡೆಸುತ್ತಿದೆ.
ಇದನ್ನು ನಾವು ಹಿಂದು ಸಂಘಟನೆಗಳಾಗಿ ಉಗ್ರವಾಗಿ ಖಂಡಿಸುತ್ತೇವೆ ಮಾತ್ರವಲ್ಲದೆ ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದರೆ ಅದಕ್ಕೆ ನೇರವಾಗಿ ಯುವ ಕಾಂಗ್ರೆಸ್ ಕಾರಣವಾಗುತ್ತದೆ..
ನಿಮ್ಮ ಇಂತಹ ಉದ್ದಟತನದ ಮಾತುಗಳನ್ನು ಇಲ್ಲಿಗೆ ನಿಲ್ಲಿಸಿ ಅಥವಾ ಮುಂಬರುವ ದಿನಗಳಲ್ಲಿ ಸಂಭವಿಸುವ ಪ್ರತಿಭಟನೆ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆಯ ಮಾತುಗಳನ್ನು ಸುಜಿತ್ ಸಫಲಿಗ ಹೇಳಿದ್ದಾರೆ




