
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ನಾವು ಯಾವತ್ತೂ ಯುದ್ಧದ ಪರ ಅಲ್ಲ. ಪಾಕಿಸ್ತಾನದ ಜೊತೆ ಯುದ್ಧದ ಅನಿವಾರ್ಯತೆ ಇಲ್ಲ. ಯುದ್ಧದ ಬದಲಾಗಿ ಭದ್ರತೆಯನ್ನು ಬಿಗಿ ಮಾಡಿಕೊಳ್ಳಬೇಕಾಗಿದೆ. ಭದ್ರತೆಯ ವಿಚಾರದಲ್ಲಿ ಕೇಂದ್ರ ಸರಕಾರ ಜನರಿಗೆ ಟೋಪಿ ಹಾಕಿದೆ. ಹಾಗಾದರೆ ಈವರೆಗೆ ಮಾಡಿದ್ದು ಬರೀ ಭಾಷಣನಾ? ಈಗ ಏನೇ ಕ್ರಮ ಕೈಗೊಂಡರು ಹೋದ 26 ಜೀವ ವಾಪಸು ತರಲು ಸಾಧ್ಯವಾ ಎಂದು ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಟೋಪಿ ಹಾಕಿದ್ದಾರೆ, ಯುದ್ಧ ಬೇಡ ಎಂದು ಪಾಕಿಸ್ತಾನದ ಪರ ವಕಾಲತ್ತು ವಹಿಸಿರುವ ಸಿಎಂ ಸಿದ್ದರಾಮಯ್ಯನವರು ” ಟೋಪಿ ಹಾಕಿದವರ” ಓಲೈಕೆಗೇ ನಿಂತಿರುವುದು ಮತ್ತೊಮ್ಮೆ ಸಾಬೀತಾಯ್ತು ಎಂದು ಶಾಸಕ ಬಿ ಸುನಿಲ್ ಕುಮಾರ್ ಟ್ವೀಟ್ ಮಾಡುವ ಮೂಲಕ,ದೇಶದ ಭದ್ರತೆಯ ವಿಚಾರದಲ್ಲೂ ನೀವು ಮಾಡುತ್ತಿರುವ ಈ ಕ್ಷುಲಕ ರಾಜಕಾರಣವನ್ನು ಒಪ್ಪುವುದಕ್ಕೇ ಸಾಧ್ಯವಿಲ್ಲ ಎಂದಿದ್ದಾರೆ.
ಈಗ ಯಾವುದೇ ಕ್ರಮ ಕೈಗೊಂಡರೂ 24 ಜನ ವಾಪಾಸ್ ಬರ್ತಾರಾ ಎಂಬ ನಿಮ್ಮ ಪ್ರಶ್ನೆ ಬಾಲಿಶತನದ ಪರಮಾವಧಿ.ಹೋದ ಪ್ರಾಣ ವಾಪಾಸ್ ಬರತ್ತಾ ಎನ್ನುವುದಕ್ಕೆ ಅದೇನು ಮುಡಾ ನಿವೇಶನವಾ ಮಾನ್ಯ ಮುಖ್ಯಮಂತ್ರಿಗಳೇ ? ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.





