
ಇನ್ನೇನು ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಇದೇ ವೇಳೆ ಭಾರತದಲ್ಲಿ ಹಲವು ನಿಯಮಗಳು ಜನವರಿ 1 ರಿಂದ ಬದಲಾಗುತ್ತಿದೆ. ಅದೇನೆಂದರೆ 2026ರಿಂದ 8ನೇ ವೇತನ ಆಯೋಗ ಜಾರಿಯಾಗುತ್ತಿದ್ದು ಇದರಿಂದ ಸ್ಯಾಲರಿ ಹೆಚ್ಚಾಗಲಿದೆ. ಈ ವೇತನ ಆಯೋಗ ನೇರವಾಗಿ ಸರ್ಕಾರಿ ನೌಕರರಿಗೆ ಸಂಬಂಧಿಸಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ಮಾಡಿ ಜನರ ಜೀವನಕ್ಕೆ ನೆರವಾಗಿದ್ದು ಇತ್ತ ಫ್ರೀ ಫಿಲ್ಲಡ್ ಐಟಿಆರ್ ಫಾರ್ಮ್‌ಗಳಿಂದ ತೆರಿಗೆ ಪಾವತಿ, ಐಟಿಆರ್ ಹೊಸ ವರ್ಷದಿಂದ ಹೆಚ್ಚಿನ ಗೊಂದಲಗಳಿಲ್ಲದೆ ಅತ್ಯಂತ ಸುಲಭವಾಗಲಿದೆ.
ಇನ್ನು ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ನೀತಿಯಲ್ಲಿ ಹೊಸ ವರ್ಷದಲ್ಲಿ ಮಹತ್ತರ ಬದಲಾವಣೆಯಾಗುತ್ತಿದ್ದು ಪ್ರಮುಖವಾಗಿ ಹಣ ಹಿಂಪಡೆಯಲು ಇದ್ದ ಸಂಕಷ್ಟಗಳು ನಿವಾರಣೆಯಾಗಿದೆ. ತುರ್ತು ಅಗತ್ಯತೆ ಸೇರಿದಂತೆ ಇತರ ಕಾರ್ಯಗಳಿಗೆ ಪಿಎಫ್ ಹಣ ಹಿಂಪಡೆಯುವ ಪ್ರಕ್ರಿಯೆ ಸುಲಭಗೊಳಿಸಲಾಗಿದೆ.





