ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ

ಪಶುಪಾಲನಾ ಮತ್ತು ಪಶುವೈದ್ಯ ಸೇವಾಇಲಾಖೆ ಕಾರ್ಕಳ ಮತ್ತು ಗ್ರಾಮ ಪಂಚಾಯತ್ ರೆಂಜಾಳ ಇವರ ಸಂಯುಕ್ತ ಆಶ್ರಯದಲ್ಲಿ ಸೆ. 26ರ ಶುಕ್ರವಾರ ರೇಬಿಸ್ ಮಾಸಾಚರಣೆ ಪ್ರಯುಕ್ತ ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೌರವಾನ್ವಿತ ರಮೇಶ್ ವಿ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ಪದ್ಮಕುಮಾರಿ ಇವರು ಎಲ್ಲರನ್ನೂ ಸ್ವಾಗತಿಸಿದರು. ಡಾ.ವಾಸುದೇವ ಪೈ , ಮುಖ್ಯ ಪಶುವೈದ್ಯಾಧಿಕಾರಿ, ಪಶು ಆಸ್ಪತ್ರೆ ಕಾರ್ಕಳ , ಸುರೇಶ್ ರಾಥೋಡ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, ಪಶು ಆಸ್ಪತ್ರೆ ಕಾರ್ಕಳ ,ಬಿ.ಆಯ್.ನಾದಫ, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, ಪಶು ಆಸ್ಪತ್ರೆ ಬೆಳ್ಮಣ್, ಶ್ರೀಮತಿ ಶೋಭಾ, ಪಶು ವೈದ್ಯಕೀಯ ಪರೀಕ್ಷಕರು, ಪಶು ಚಿಕಿತ್ಸಾಲಯ ನಿಟ್ಟೆ, ಶ್ರೀಮತಿ ಜ್ಯೋತಿ, ಶ್ರೀಮತಿ ಸುಷ್ಮಾ, ಶ್ರೀಮತಿ ದಿವ್ಯಾ( ಹೊರಗುತ್ತಿಗೆ ಡಿ ದರ್ಜೆ),ಶ್ರೀಮತಿ ಮಲ್ಲಿಕಾ ಪಶುಸಖಿ ರೆಂಜಾಳ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಗೌಡ, ಸದಸ್ಯರಾದ ಶ್ರೀಮತಿ ಆಶಾ ಎಂ, ರಮೇಶ್ ಶೆಟ್ಟಿ ಮಂಜೊಟ್ಟು, ಸತೀಶ್, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು. ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 235 ನಾಯಿಗಳಿಗೆ ಉಚಿತ ರೇಬಿಸ್ ಲಸಿಕೆಯನ್ನು ನೀಡಲಾಯಿತು.






















































