ವಿವಾದಿತ ಕಟ್ಟಡಕ್ಕೆ ಡೋರ್ ನಂಬರ್ ನೀಡುವುದು ಸರಿಯಲ್ಲ ಮನೀಷ್ ನಿಟ್ಟೆ ಆರೋಪ

ಕಾರ್ಕಳ: ನಿಟ್ಟೆ ಸರ್ಕಾರಿ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಕಾಪುಚಿನ್ ಪ್ರಾಯರ್ ಮೈನರ್ ಸೊಸೈಟಿಯ ಕೃಪಾ ಕಿರಣ್ ಎಂಬ ಕಟ್ಟಡವು ವಿವಾದಿತ ಕಟ್ಟಡವಾಗಿ ಗ್ರಾಮದ ಜನರ ಸೌಹಾರ್ದಗೆ ದಕ್ಕೆ ತರುವಂತಿದೆ ಎಂದು ತಾಲೂಕು ಬಜರಂಗದಳಸಂಯೋಜಕ ಮನೀಶ್ ನಿಟ್ಟೆ ಆರೋಪಿಸಿದ್ದಾರೆ
ವಾಸ್ತವ್ಯಕ್ಕಾಗಿ ಕಟ್ಟಡ ಪರವಾನಿಗೆ ಪಡೆದುಕೊಂಡು ಕಟ್ಟಡ ಪೂರ್ಣಗೊಂಡ ನಂತರ ಅದನ್ನು ಕೌನ್ಸೆಲಿಂಗ್ ಸೆಂಟರ್ ಆಗಿ ಪರಿವರ್ತಿಸಲು ಪ್ರಯತ್ನಿಸಿರುವುದು ಮಾತ್ರವಲ್ಲದೆ, ನಾಮಫಲಕವನ್ನು ಅಳವಡಿಸಿರುತ್ತಾರೆ ಆದರೆ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದಂತೆ ನಾಮ ಫಲಕದಿಂದ ಕೌನ್ಸಿಲಿಂಗ್ ಸೆಂಟರ್ ಎಂಬ ಪದಗಳನ್ನು ತೆಗೆದುಹಾಕಲಾಗಿದೆ. ಕ್ರಿಶ್ಚಿಯನ್ ಸಮುದಾಯದವರಿಗೆ ಕೌನ್ಸಿಲಿಂಗ್ ಮಾಡುತ್ತೇವೆ ಹಾಗೂ ಇತರರನ್ನು ಯಾವುದೇ ಬಲವಂತದಿಂದ ಕರೆಸುವುದಿಲ್ಲ ಎನ್ನುವಂತೆ ದ್ವಂದ್ವವಾಗಿ ಅಫಿಡವಿಟ್ ಸಲ್ಲಿಸಿರುತ್ತಾರೆ, ಇದರ ಅರ್ಥ ‘ಯಾರೂ ಬರಬಹುದು’ ಎಂಬುದು. ಅಷ್ಟೇ ಅಲ್ಲದೇ ಪಂಚಾಯತ್ NOC ಇಲ್ಲದೆಯೇ ವಿವಾದಿತ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಕಾನೂನು ಬಾಹಿರ ಮತ್ತು ಅಕ್ರಮ ವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ನಿಟ್ಟೆ ಗ್ರಾಮದ ನಾಗರೀಕ ಸಮಾಜ ಈ ಬಗ್ಗೆ ಈಗಾಗಲೇ ಹಲವು ಮನವಿ ಪತ್ರ ಸಲ್ಲಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಇದೀಗ ಈ ವಿವಾದಿತ ಕಟ್ಟಡಕ್ಕೆ ಡೋರ್ ನಂಬರ್ ಪಡೆಯುವ ಸಲುವಾಗಿ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಈ ಕಟ್ಟಡ ಬರೀ ವಸತಿಗಾಗಿ ಎಂಬಂತೆ ಬಿಂಬಿಸುತ್ತಿದ್ದಾರೆ, ಮತ್ತು ಕಟ್ಟಡ ವಿನ್ಯಾಸವು ಕೂಡ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲದೆ ಇರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಇಂದು ನಡೆದ ಸಾಮಾಜಿಕ ನ್ಯಾಯ ಸಮಿತಿ ಸಭೆಯಲ್ಲಿ ಅದು ಕ್ರಿಶ್ಚಿಯನ್ ಧರ್ಮಗುರುಗಳ ವಾಸ್ತವ್ಯ ಕ್ಕಾಗಿ ನಿರ್ಮಾಣಗೊಂಡ ಕಟ್ಟಡ ಅದಕ್ಕೆ ಡೋರ್ ನಂಬರ್ ನೀಡುವಂತೆ ಕೇಳಿದ್ದು ಆದರೆ ಯಾವುದೇ ಕಾರಣಕ್ಕೂ ಡೋರ್ ನಂಬರ್ ನೀಡಬಾರದು ಮತ್ತು ಕಟ್ಟಡ ಪರವಾನಿಗೆ ಹಾಗೂ ಅಕ್ರಮ ವಿದ್ಯುತ್ ಸಂಪರ್ಕ ರದ್ದುಗೊಳಿಸಬೇಕು ಎಂಬುದು ನಿಟ್ಟೆ ಗ್ರಾಮಸ್ಥರ ಆಗ್ರಹ. ಇದೇ ರೀತಿ ನಿಟ್ಟೆ ಗ್ರಾಮದ ಮಾಂಗಲ್ಯ ಸಭಾಂಗಣದಲ್ಲಿ ಕೌನ್ಸಿಲಿಂಗ್ ಸೆಂಟರ್ ಹೆಸರಿನಲ್ಲಿ ಮತಾಂತರ ಚಟುವಟಿಕೆ ನಡೆದು ಕಾನೂನು ಹೋರಾಟದ ಮೂಲಕವೇ ಅದನ್ನು ನಿಲ್ಲಿಸಲಾಗಿದೆ, ಈಗ ಮತ್ತೋಂದು ಅಂತಹದೇ ಕಾರ್ಯಕ್ಕೆ ಅವಕಾಶ ನೀಡದಂತೆ ಎಲ್ಲರಿಂದಲೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಒಂದು ವೇಳೆ ಒತ್ತಡಕ್ಕೆ ಮಣಿದು ಡೋರ್ ನಂಬರ್ ನೀಡಿದ್ದೆ ಆದಲ್ಲಿ ಮುಂದಿನ ಪರಿಣಾಮಕ್ಕೆ ಪಂಚಾಯತ್ ಅಧಿಕಾರಿಗಳೆ ನೇರ ಜವಾಬ್ದಾರಿ ಎಂದು ಬಜರಂಗದಳ ತಾಲೂಕು ಸಂಯೋಜಕ ಮನೀಶ್ ನಿಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ





