ಶಿವಮೊಗ್ಗ ಮೃಗಾಲಯ ಘಟನೆ

ಶಿವಮೊಗ್ಗ ಮೃಗಾಲಯದಲ್ಲಿ ಇತ್ತೀಚೆಗೆ ಯುವ ವೈದ್ಯ ಡಾ. ಸಮೀಕ್ಷಾ ರೆಡ್ಡಿ ನೀರಾನೆ ಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ, ದಾಳಿಗೊಳಗಾಗಿ ಮೃತಪಟ್ಟಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಹಾಡ್ಯ,
ಮೃಗಾಲಯದ ಸಿಬ್ಬಂದಿಗಳೊಂದಿಗೆ ಡಾ. ಸಮೀಕ್ಷಾ ರೆಡ್ಡಿ ನೀರಾನೆಯ ಚಿಕಿತ್ಸೆಗೆ ಮುಂದಾಗಿದ್ದು, ಈ ಸಂದರ್ಭದಲ್ಲಿ ನೀರಾನೆ ಸಿಟ್ಟಿಗೆದ್ದಿದೆ. ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಿಂದ ಏಣಿಯಿಂದ ಜಾರಿ ವೈದ್ಯೆ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ನೀರಾನೆ ವೈದ್ಯಯ ಮೇಲೆ ದಾಳಿ ನಡೆಸಿದ್ದು ಚಿಕಿತ್ಸೆ ಫಲಕಾರಿಯಾಗದೆ ವೈದ್ಯೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಮೃಗಾಲಯಕ್ಕೆ ಬಂದು ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ಉಂಟಾಗಿದ್ದು, ನಮಗೆ ಅತೀವ ದುಃಖ ತಂದಿದೆ. ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿದ ಡಾ. ಸಮೀಕ್ಷಾ ರೆಡ್ಡಿ ಮೃಗಾಲಯದಲ್ಲಿರುವ ಪ್ರಾಣಿಗಳ ಬಗ್ಗೆ ಅತಿ ಪ್ರೀತಿ ತೋರುತ್ತಿದ್ದರು. ಆ ಪ್ರೀತಿಯೇ ಅವರ ಪ್ರಾಣಕ್ಕೆ ಕುಂದು ತಂದಿರುವುದು ತುಂಬಾ ನೋವು ತಂದಿದೆ. ಈಗಾಗಲೇ ಘಟನೆಯ ಬಗ್ಗೆ ಪೊಲೀಸ್ ಹಾಗೂ ಇಲಾಖೆಯಿಂದ ತನಿಖೆ ಆರಂಭಗೊಂಡಿದ್ದು, ತಪ್ಪಿದಸ್ಥರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.






















































