27.2 C
Udupi
Wednesday, December 24, 2025
spot_img
spot_img
HomeBlogನನ್ನನ್ನು ಭೇಟಿಯಾಗಲು ಬರುವವರು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು: ಸಂಸದೆ ಕಂಗನಾ

ನನ್ನನ್ನು ಭೇಟಿಯಾಗಲು ಬರುವವರು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು: ಸಂಸದೆ ಕಂಗನಾ

ನಟಿ ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದು ಇದೀಗ ತಮ್ಮನ್ನು ಭೇಟಿಯಾಗಲು ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು ಎಂದು ಹೇಳಿದ್ದಾರೆ.

ನನ್ನ ಕ್ಷೇತ್ರದ ಜನರು ನನ್ನನ್ನು ಯಾವುದೇ ಕಾರಣಕ್ಕೆ ಭೇಟಿಯಾಗಲು ಬಯಸಿದರೆ ಅವರು ಆಧಾರ್ ಕಾರ್ಡ್ ತರಬೇಕು. ಏಕೆಂದರೆ ಅವರು ಮಂಡಿ ಸಂಸದೀಯ ಕ್ಷೇತ್ರದವರೇ ಅಥವಾ ಬೇರೆ ಜನರಿರಬಹುದಾ ಎಂಬುದು ತಿಳಿಯುತ್ತದೆ ಎಂದು ಕಂಗನಾ ಹೇಳಿದ್ದಾರೆ.

ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಇದರಿಂದ ನೀವು ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ. ನೀವು ಮೇಲಿನ ಹಿಮಾಚಲ ಪ್ರದೇಶದವರಾಗಿದ್ದರೆ ನಮ್ಮ ಕುಲು ಮನಾಲಿ ಮನೆಗೆ ಬನ್ನಿ. ನೀವು ಮಂಡಿಯವರಾಗಿದ್ದರೆ ಮಂಡಿ ಕಚೇರಿಗೆ ಬನ್ನಿ. ಹಿಮಾಚಲದ ಕೆಳಗಿನವರಾಗಿದ್ದರೆ ಸದಾ ಘಾಟ್‌ನಲ್ಲಿರುವ ನನ್ನ ಕಚೇರಿಗೆ ಬನ್ನಿ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಂಡಿಯಿಂದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿದ್ದ ಮತ್ತು ಪ್ರಸ್ತುತ ಹಿಮಾಚಲ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ವಿಕ್ರಮಾದಿತ್ಯ ಸಿಂಗ್, ಜನಪ್ರತಿನಿಧಿಯೊಬ್ಬರು ತಮ್ಮ ಸಂಸದೀಯ ಕ್ಷೇತ್ರದ ಜನರಿಗೆ ಬೇಕಾದರೆ ಬರಲಿ ಎಂದು ಹೇಳುವುದು ಉತ್ತಮ ನಡವಳಿಕೆಯಲ್ಲ. ಸ್ವಂತ ರಾಜ್ಯದವರೇ ಆಗಿರಲಿ, ಪ್ರವಾಸಿಗರೇ ಇರಲಿ, ಸಾರ್ವಜನಿಕ ಪ್ರತಿನಿಧಿಗಳು ಎಲ್ಲರನ್ನೂ ಭೇಟಿಯಾಗಬೇಕು ಎಂದು ಹೇಳಿದ ವಿಕ್ರಮಾದಿತ್ಯ ಸಿಂಗ್, ನೀವು ನನ್ನನ್ನು ಭೇಟಿಯಾಗಲು ಬಯಸಿದರೆ ಆಧಾರ್ ಕಾರ್ಡ್ ಅಗತ್ಯವಿಲ್ಲ ಎಂದು ವ್ಯಂಗ್ಯವಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದು ಹಂಚಿಕೊಂಡಿದ್ದಾರೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page