ವಾಣಿಜ್ಯ ವಿಭಾಗದ ಕೆ.ಅಮೃತ ಕಾಮತ್ ರಾಜ್ಯಕ್ಕೆ 5ನೇ ಸ್ಥಾನ

ದ್ವಿತೀಯ ಪಿಯುಸಿ 2026 ಪರೀಕ್ಷೆಯಲ್ಲಿ ಎನ್.ಎಸ್.ಎ.ಎಂ ಪಿ ಯು ಕಾಲೇಜ್ ನಿಟ್ಟೆ, ಇಲ್ಲಿನ ವಾಣಿಜ್ಯ ವಿಭಾಗದ ಕೆ. ಅಮೃತಾ ಕಾಮತ್ ಇವರು 600 ರಲ್ಲಿ 596 ಪಡೆದು ರಾಜ್ಯಕ್ಕೆ 5 ನೇ ಸ್ಥಾನವನ್ನು ಪಡೆದು ಶೇಕಡ 99.3% , ರಷ್ಟು ಅಂಕಗಳನ್ನು ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.
ಇವರು ಕಾರ್ಕಳದ ಕೆ. ಗುರುಪ್ರಸಾದ್ ಕಾಮತ್ ಹಾಗು ಕೆ. ಸಂಗೀತಾ ಕಾಮತ್ ಇವರ ಹಿರಿಯ ಮಗಳಾಗಿದ್ದಾರೆ.








