31 C
Udupi
Friday, March 14, 2025
spot_img
spot_img
HomeBlogದಿ ಗ್ರೇಟ್ ಮರಾಠಾಸ್ ಕಾರ್ಕಳ ಆಶ್ರಯದಲ್ಲಿ, ಮರಾಠ ಸಮಾಜ ಬಂಧುಗಳಿಗಾಗಿ ವಿವಿಧ ಪಂದ್ಯಾಟಗಳು

ದಿ ಗ್ರೇಟ್ ಮರಾಠಾಸ್ ಕಾರ್ಕಳ ಆಶ್ರಯದಲ್ಲಿ, ಮರಾಠ ಸಮಾಜ ಬಂಧುಗಳಿಗಾಗಿ ವಿವಿಧ ಪಂದ್ಯಾಟಗಳು

5 ಜಿಲ್ಲೆಯನ್ನು ಒಗ್ಗೂಡಿಸಿ ಕ್ರೀಡಾಕೂಟದಿಂದ ಸಮಾಜದ ಬಲವರ್ಧನೆ ಸಾಧ್ಯ: ವಿ ಸುನಿಲ್ ಕುಮಾರ್

ದಿ ಗ್ರೇಟ್ ಮರಾಠಾಸ್ ಕಾರ್ಕಳ ಇವರ ಆಶ್ರಯದಲ್ಲಿ ಉಡುಪಿ, ಮಂಗಳೂರು, ಕಾಸರಗೋಡು, ಶಿವಮೊಗ್ಗ ಚಿಕ್ಕಮಂಗಳೂರು ಜಿಲ್ಲೆಯ ಮರಾಠ ಸಮಾಜ ಬಂಧುಗಳ ಓವರ್ ಆರ್ಮ್ ಕ್ರಿಕೆಟ್ ಹಾಗೂ ಥ್ರೋ ಬಾಲ್ ಮತ್ತು 15 ವರ್ಷದ ಒಳಗಿನ ಮಕ್ಕಳಿಗೆ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸ್ವರಾಜ್ ಮೈದಾನ, ಗಾಂಧಿ ಮೈದಾನ ಹಾಗೂ ಕಾರ್ಕಳ ತಾಲೂಕು ಕ್ರೀಡಾಂಗಣ ದಿನಾಂಕ ಒಂದು 1-2-2025 ಶನಿವಾರ ಮತ್ತು 2-2-2025 ಆದಿತ್ಯವಾರದಂದು ಜರುಗಿತು.


ಸ್ವರಾಜ್ ಮೈದಾನದ ಛತ್ರಪತಿ ಶಿವಾಜಿ ಮಹಾರಾಜರ ವೇದಿಕೆಯ ಉದ್ಘಾಟನೆಯನ್ನು ಕಾರ್ಕಳ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ರವರು ಶಿವಾಜಿ ಮಹಾರಾಜರ ಪುತ್ತಳಿಗೆ ಆರತಿ ಬೆಳಗಿಸಿ ತಿಲಕವನ್ನು ಇಟ್ಟು ಉದ್ಘಾಟಿಸಿದರು.

5 ಜಿಲ್ಲೆಯ ಮರಾಠ ಸಮುದಾಯದ ಜನತೆಯನ್ನು ಒಗ್ಗೂಡಿಸಿಕೊಂಡು ಕಾರ್ಕಳದಲ್ಲಿ ಕ್ರೀಡಾಕೂಟ ಆಯೋಜಿಸುವುದು ಅತ್ಯಂತ ಸಂತಸ ತಂದಿದೆ ಕ್ರೀಡೆಯ ಮೂಲಕ ಸಮಾಜದ ಬಲವರ್ಧನೆಯ ಕೆಲಸವಾಗುತ್ತಿದೆ ಎಂದು ವಿ ಸುನಿಲ್ ಕುಮಾರ್ ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರು ಆರಂಭದಲ್ಲಿ ಕ್ರೀಡೆಯ ಮೂಲಕ ಯುವ ಜನತೆಯನ್ನು ಸಂಘಟಿಸಿ ಬಳಿಕ ಮೊಘಲರ ವಿರುದ್ಧ ಹೋರಾಟಕ್ಕಾಗಿ ಬಲಿಷ್ಠ ಸೈನ್ಯವನ್ನು ನಿರ್ಮಿಸಿದರು ಇಂದು ಕೂಡ ಸಮಾಜವನ್ನು ಸಂಘಟಿಸುವ ಮೂಲಕ ರಾಷ್ಟ್ರವನ್ನು ಸದೃಢಗೊಳಿಸುವಲ್ಲಿ ಸಮಾಜದ ಜನತೆ ಕೈಗೊಂಡ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಸಮಾಜದ ಹಿರಿಯರು ಹಾಗೂ ದಾನಿಗಳಾದ ಉದ್ಯಮಿ ಶ್ರೀ.ಕೆ ಉಮೇಶ್ ರಾವ್ ರವರು ಅಧ್ಯಕ್ಷತೆಯನ್ನು ವಹಿಸಿ ಕ್ರೀಡಾನಿಧಿಗೆ ಸಹಕರಿಸುವುದಾಗಿ ತಿಳಿಸಿದರು.
ಮುಂಡ್ಕೂರು ರಾಜಶ್ರೀ ಸಮೂಹ ಸಂಸ್ಥೆಯ ಮಾಲಕರಾದ ಜನ್ನೊಜಿ ರಾವ್,ಕೆ. ಕೆ. ಎಮ್. ಪಿ ಬೆಂಗಳೂರು ಇದರ ಉಪಾಧ್ಯಕ್ಷರಾದ ನಾಗೇಶ್ ರಾವ್ ವಂಡ್ಸೆ ಮಾತನಾಡಿ ಕಾರ್ಕಳದ ಸಮಾಜ ಬಂದುಗಳ ಶಿಸ್ತು ಹಾಗೂ ವ್ಯವಸ್ಥೆಗೆ ಮೆಚ್ಚುಗೆ ತಿಳಿಸಿದರು ಉದ್ಯಮಿಗಳಾದ ಅರುಣ್ ಕುಮಾರ್ ನಿಟ್ಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುಭೋದ ರಾವ್, ಸಿ. ಎ ಹರೀಶ್ ರಾವ್ ಮೋರೆ, ಕಾವೇರಿ ಕನ್ಸ್ಟ್ರಕ್ಷನ್ ಜೋಡುಕಟ್ಟೆ ಇದರ ಮಾಲಕರಾದ ರಮಾನಾಥ್ ರಾವ್ ತಾಮಸ, ಎಸ್ ಸತ್ಯಾರ್ಥಿ ರಾವ್ ವೀಡೆ, ಸಂತೋಷ್ ರಾವ್ ಲಾಡ್ ಸಂತೋಷ್ ರಾವ್ ಕವಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮ ನಿರೂಪಣೆಯನ್ನು ಶ್ರುತಿ ಶಿಂದೆ ನೆರವೇರಿಸಿದರು.

ದಿನಾಂಕ 2- 2- 2025ನೇ ಭಾನುವಾರ ಬೆಳಿಗ್ಗೆ ಮಹಿಳೆಯರಿಗಾಗಿ ತ್ರೋಬಾಲ್ ಕ್ರೀಡಾಕೂಟವನ್ನು ಛತ್ರಪತಿ ಶಿವಾಜಿ ಮಹಾರಾಜ್ ವೇದಿಕೆಯಲ್ಲಿ ಶ್ರೀಮತಿ ಚಂದ್ರಕಲಾ. ಜೆ.ರಾವ್ ರಾಜಶ್ರೀ ಸಮೂಹ ಸಂಸ್ಥೆ ಮುಂಡ್ಕೂರು ಇವರು ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಗೆ ಆರತಿ ಬೆಳಗಿಸಿ ತಿಲಕವನ್ನು ಇಡುವ ಮೂಲಕ ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಡಾ. ಪಲ್ಲವಿ ಕೀರ್ತನ್ ಕುಮಾರ್ ಅಸೋಸಿಯೇಟ್ ಪ್ರೊಫೆಸರ್ ಇಂಜಿನಿಯರಿಂಗ್ ವಿಭಾಗ ನಿಟ್ಟೆ ಇವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀಮತಿ
ಡಾ. ಸುಮತಿ ರಾವ್ ಪವಾರ್ ಅಸೋಸಿಯೇಟ್ ಪ್ರೊಫೆಸರ್ ಇಂಜಿನಿಯರಿಂಗ್ ವಿಭಾಗ ನಿಟ್ಟೆ
ಶ್ರೀಮತಿ ವೇದಾವತಿ ಎನ್ ದೈಹಿಕ ಶಿಕ್ಷಕರು ಸುಂದರ ಪುರಾಣಿಕ ಪ್ರೌಢಶಾಲೆ ಕಾರ್ಕಳ
ಶ್ರೀಮತಿ ಸುಶೀಲ ರಾವ್ ಪವಾರ್ ಅಧ್ಯಕ್ಷರು ಮರಾಠ ಸಮಾಜ ಕೊಪ್ಪ ಶ್ರೀಮತಿ ಶೋಭಾ ವಿಠ್ಠಲ್ಜಿ ರಾವ್ ಜಾಧವ್ ಸೇವಾ ಪ್ರತಿನಿಧಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ಶ್ರೀಮತಿ ನಾಗವೇಣಿ ರಾವ್ ಸೆಪ್ಟೆಕರ್ ಸಾಣೂರು ಶ್ರೀಮತಿ ಕುಸುಮ ಸುಧಾಕರ್ ರಾವ್ ಬಹುಮಾನ್ ಕಾರ್ಕಳ, ಶ್ರೀಮತಿ ಜಯಂತಿ ದಿನೇಶ್ ರಾವ್ ಕವಡೆ ಕಾಳಿಕಾಂಬ ಕಾರ್ಕಳ ಶ್ರೀಮತಿ ರಾಜೇಶ್ವರಿ ತಮಾಸ ಮಾಜಿ ಅಧ್ಯಕ್ಷರು ಮೀಯಾರು ಗ್ರಾಮ ಪಂಚಾಯತ್ ಕಾರ್ಕಳ ಶ್ರೀಮತಿ ರಾಜೇಶ್ವರಿ ಪ್ರಕಾಶ್ ರಾವ್ ಕವಡೆ ಕಾಳಿಕಾಂಬ ಕಾರ್ಕಳ ಇವರು ಉಪಸ್ಥಿತರಿದ್ದರು ಕುಮಾರಿ ದಿಶಾ ರಾವ್ ವೀಡೆ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಶಕುಂತಲಾ ರಾವ್ ಕವಡೆ ಸ್ವಾಗತಿಸಿದರು.

ಬಹುಮಾನ ವಿತರಣೆ ಸಮಾರೋಪ ಸಮಾರಂಭ 2-2-2025 ಭಾನುವಾರ ಸಾಯಂಕಾಲ 5:00 ಗಂಟೆಗೆ ಸ್ವರಾಜ್ ಮೈದಾನದ ಛತ್ರಪತಿ ಶಿವಾಜಿ ಮಹಾರಾಜ್ ವೇದಿಕೆಯಲ್ಲಿ ನಡೆಯಿತು ಸಭಾಧ್ಯಕ್ಷತೆ ವಹಿಸಿದ ದಿ ಗ್ರೇಟ್ ಮರಾಠ ಟೀಂನ ಸ್ಥಾಪಕ ಹಾಗೂ ಕೆ. ಕೆ. ಎಂ. ಪಿ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ. ಕೆ ಬಿ ಕೀರ್ತನ್ ಕುಮಾರ್ ಲಾಡ್ ರವರು ಮಾತನಾಡಿ ಈ ಕ್ರಿಡಾ ಕೂಟದ ಯಶಸ್ಸು ದಿ ಗ್ರೇಟ್ ಮರಾಠ ತಂಡದ ಸದಸ್ಯರಿಗೆ ಹಾಗೂ ಕ್ರೀಡಾಪಟುಗಳಿಗೆ ಮತ್ತು ಸಮಾಜ ಬಂಧುಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಬೋಳ ಪ್ರಶಾಂತ್ ಕಾಮತ್ ರವರು ಮಾತನಾಡಿ ನಾವು ಎಂದಿಗೂ ಮರಾಠರ ಯಾವುದೇ ಕಾರ್ಯಕ್ರಮವಿದ್ದರೂ ಸಹಕಾರ ಮಾಡುವುದಾಗಿ ತಿಳಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು ಸದಾನಂದ ಸಾಲಿಯಾನ್ ವಕೀಲರು ಕಾರ್ಕಳ ಇವರು ಮಾತನಾಡಿ ಕಾರ್ಕಳದ ಮರಾಠರು ಕಾರ್ಕಳಕ್ಕೆ ಮಾದರಿ ಎಂದು ತಿಳಿಸಿದರು ವೇದಿಕೆಯಲ್ಲಿ ಕೆ.ಕೆ. ಎಂ.ಪಿ ಉಡುಪಿ ಜಿಲ್ಲೆ ಅಧ್ಯಕ್ಷ ಪ್ರಕಾಶ್ ರಾವ್ ಕವಡೆ ಚಿರಾಗ್ ರಾವ್ ಹೋಟೆಲ್ ಚಿರಾಗ್ ಬಜಗೋಳಿ ಸಂತೋಷ್ ರಾವ್ ಅಧ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಾಹಕಾರ ಸಂಘ ಕಾರ್ಕಳ ಸಂತೋಷ್ ಲಾಡ್ ಕಾರ್ಕಳ ,ಸತ್ಯಾರ್ಥಿ ರಾವ್ ವಿಡೆ ,ರಮನಾಥ ರಾವ್ ತಮಾಸ ರಾಜಾರಾಮ ರಾವ್ ಉಪಸ್ಥಿತರಿದ್ದರು .ತದನಂತರ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಪ್ರಶಸ್ತಿಯ ವಿಜೇತರು ಮಲ್ನಾಡ್ ವಾರಿಯರ್ಸ್ ಕೊಪ್ಪ,ದ್ವಿತೀಯ ಪ್ರಶಸ್ತಿ ವಿಜೇತರು ಆರ್ಯನ್ಸ್ ಲೆಜೆಂಡ್ಸ್ ಮಂಗಳೂರು ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತರು ಮರಾಠ ಯುವನ್ಸ್ ಬೆಳ್ತಂಗಡಿ ,ದ್ವಿತೀಯ ಪ್ರಶಸ್ತಿ ವಿಜೇತರು ಛತ್ರಪತಿ ಪಡಿಲ್ ಮಹಿಳಾ ಕ್ರಿಕೆಟ್ ಪ್ರಥಮ ಪ್ರಶಸ್ತಿ ವಿಜೇತರ ವೀರ್ ಶಿವಾಜಿ ಆದೂರು ದ್ವಿತೀಯ ಪ್ರಶಸ್ತಿ ವಿಜೇತರು ದಿ ಗ್ರೇಟ್ ಮರಾಠ ಕಾರ್ಕಳ 15 ವರ್ಷದ ಒಳಗಿನ ಹುಡುಗರ ಕ್ರಿಕೆಟ್ ಪಂದ್ಯಾಟ ಪ್ರಥಮ ಪ್ರಶಸ್ತಿ ವಿಜೇತರು ದಿ ಗ್ರೇಟ್ ಮರಾಠ ಕಾರ್ಕಳ ದ್ವಿತೀಯ ಪ್ರಶಸ್ತಿ ವಿಜೇತರು ಕೆ. ಎಂ. ಎಸ್ ಕಾರ್ಕಳ ಪ್ರಶಸ್ತಿ ಟ್ರೊಫಿ ಹಾಗೂ ನಗದು ಬಹುಮಾನವನ್ನು ಪಡೆದಿರುತ್ತಾರೆ ಬಹುಮಾನ ವಿತರಣಾ ಕಾರ್ಯಕ್ರಮ ನಿರೂಪಣೆಯನ್ನು ಸಂತೋಷ್ ರಾವ್ ಕವಡೆ ನಿರ್ವಹಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page