21.1 C
Udupi
Sunday, February 1, 2026
spot_img
spot_img
HomeBlogತಮ್ಮನ್ನು ತಾವು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್

ತಮ್ಮನ್ನು ತಾವು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡೂರೋ ಅವರನ್ನು ಅಮೆರಿಕಾದ ಪಡೆಗಳು ಸೆರೆಹಿಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮನ್ನು ತಾವು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಣೆ ಮಾಡಿದ್ದಾರೆ.

ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ವಿಕಿಪೀಡಿಯಾ ಪುಟದ ಮಾದರಿಯ ಒಂದು ಎಡಿಟ್ ಮಾಡಿದ ಫೋಟೋವನ್ನು ಹಂಚಿಕೊಂಡ ಟ್ರಂಪ್ ಈ ಚಿತ್ರದ ಕೆಳಗೆ ‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ-ಜನವರಿ 2026 ರಿಂದ ಅಧಿಕಾರದಲ್ಲಿ’ ಎಂದು ಬರೆದುಕೊಂಡಿದ್ದಲ್ಲದೆ ಜೆ.ಡಿ ವ್ಯಾನ್ಸ್ ಅವರನ್ನು ಉಪಾಧ್ಯಕ್ಷರೆಂದು ಉಲ್ಲೇಖಿಸಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

2026ರ ಜನವರಿ 3ರಂದು ಅಮೆರಿಕಾದ ಸೇನೆಯು ವೆನೆಜುವೆಲಾದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ಅಮೆರಿಕಕ್ಕೆ ಕರೆತಂದಿದ್ದು ಈ ಬಳಿಕ ವೆನೆಜುವೆಲಾದ ಆಡಳಿತವನ್ನು ಅಮೆರಿಕವೇ ತಾತ್ಕಾಲಿಕವಾಗಿ ನಡೆಸಲಿದೆ ಎಂದು ಟ್ರಂಪ್ ಈ ಮೊದಲೇ ಹೇಳಿದ್ದರು. ಆದರೆ ವೆನಿಜುವೆಲಾದ ಸುಪ್ರೀಂ ಕೋರ್ಟ್ ಈಗಾಗಲೇ ಡೆಲ್ಸಿ ರೊಡ್ರಿಗಸ್ ಅವರನ್ನು ಹಂಗಾಮಿ ಅಧ್ಯಕ್ಷೆಯನ್ನಾಗಿ ನೇಮಿಸಿದ್ದು ಇತ್ತ ಟ್ರಂಪ್ ಅವರ ಇತ್ತೀಚಿನ ಪೋಸ್ಟ್ ಆ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಅಮೆರಿಕಾ ಬಯಸುತ್ತಿದೆಯೇ ಎಂಬ ಗಂಭೀರ ಅನುಮಾನಗಳನ್ನು ಹುಟ್ಟು ಹಾಕಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page