ಬಿಜೆಪಿ ಹಿರಿಯ ಮುಖಂಡ ಸೂರ್ಯಕಾಂತ್ ಶೆಟ್ಟಿ ಪ್ರಶ್ನೆ

ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ-01 ರಲ್ಲಿ ಬೆಳ್ಮಣ್ ಸಮೀಪ ಕಂಚಿನಡ್ಕ ಎಂಬಲ್ಲಿ ಟೋಲ್ ಸಂಗ್ರಹ ಮಾಡುವ ಬಗ್ಗೆ ಹಾಸನ ಮೂಲದ ಭಾರತೀ ಕನ್ಸ್‌ಟ್ರಕ್ಷನ್ ಎಂಬುವವರಿಗೆ ಕಾರ್ಯದೇಶ ನೀಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ಟೋಲ್ ಸಂಗ್ರಹಕ್ಕೆ ಮತ್ತೊಮ್ಮೆ ಮುಂದಾಗಿರುವುದು ಖೇದಕರ ಹಾಗೂ ಈ ಬಗ್ಗೆ ಕಾರ್ಕಳದ ಕಾಂಗ್ರೆಸ್‌ನ ಮೌನವೇಕೆ? ತಮ್ಮ ವೈಯುಕ್ತಿಕ ರಾಜಕೀಯ ಅಸ್ತಿತ್ವ ಉಳುಸಿದುವುದಕ್ಕೋಸ್ಕರ ಬೆಂಗಳೂರಿಗೆ ಹೋಗಿ ಪ್ರತಿಭಟಿಸುವ ಕಾರ್ಕಳದ ಕಾಂಗ್ರೆಸ್ ನಾಯಕರು ಕಾರ್ಕಳದೇ ಬೆಳ್ಮಣ್‌ನಲ್ಲಿ ಟೋಲ್ ಸಂಗ್ರಹ ಮಾಡುವ ಬಗ್ಗೆ ಒಂದು ಬಾರಿಯಾದರೂ ವಿಚಾರಿಸುವ ಕಾಳಜಿಯನ್ನು ತೋರಿಸದೇ ಇರುವುದು ಇವರಿಗೆ ಕಾರ್ಕಳ ಜನತೆಯ ಬಗ್ಗೆ ಯಾವುದೇ ಕಿಂಚಿತ್ತೂ ಕಾಳಜಿ ಇಲ್ಲದಿರುವುದನ್ನುಬಹಿರಂಗ ಪಡಿಸಿದೆ. ಹಾಗಾದರೆ ಇವರಿಗೆ ಕಾರ್ಕಳದ ಜನತೆ ಬಗ್ಗೆ ಜವಬ್ದಾರಿ ಇಲ್ಲವೇ…? ಎಂದು ಹಿರಿಯ ಬಿಜೆಪಿ ಮುಖಂಡ ಕೆದಿಂಜೆ ಸೂರ್ಯಕಾಂತ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಪರಶುರಾಮ ಥೀಂ ಪಾರ್ಕ್ ಬಗ್ಗೆ ಪ್ರತಿಭಟನೆಗೆ ಬೆಂಗಳೂರಿಗೆ ತೆರಳಿದರಲ್ಲಿ ಬೆಳ್ಮಣ್‌ನ ಭಾಗದ ಕಾಂಗ್ರೆಸ್ಸಿಗರುಇದ್ದರು. ಆದರೂ ಕೂಡ ಪ್ರತಿಭಟನೆಯಲ್ಲಾಗಲಿ, ನಂತರ ಸಚಿವರಿಗೆ ಮನವಿ ಮಾಡುವ ಸಂದರ್ಭವಾಗಲೀ ಟೋಲ್ ಸಂಗ್ರಹ ವಿರೋಧ ಮಾಡುವಾಗ ಯಾವುದೇ ಒಂದು ಮಾತನ್ನೂ ಸಹ ಆಡಿರುವುದಿಲ್ಲ.ಇದರ ಮೊದಲು ಬೆಳ್ಮಣ್‌ನಲ್ಲಿ ಟೋಲ್ ಸಂಗ್ರಹಕ್ಕೆ ಅಂದಿನ ಕಾಂಗ್ರೆಸ್ ಸರ್ಕಾರ ಮುಂದಾದಾಗ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ರವರು ಸ್ಥಳೀಯ ಹೋರಾಟಗಾರರೊಂದಿಗೆ, ಅದರಲ್ಲೂ ಈ ಭಾಗದ ಪ್ರಮುಖ ನಾಯಕರಾದ ನಂದಳಿಕೆ ಚಾವಡಿ ಸುಹಾಸ್ ಹೆಗ್ಡೆಯವರೊಂದಿಗೆ ಹೋರಾಟ ನಡೆಸಿ ಟೋಲ್ ಸಂಗ್ರಹವನ್ನು ರದ್ದುಪಡಿಸುವ ಎದೆಗಾರಿಕೆಯನ್ನು ತೋರಿಸಿದರು.ಈಗ ಇವರದೇ ಪಕ್ಷದ ಸರ್ಕಾದ ರಾಜ್ಯದಲ್ಲಿ ಅಸ್ಥಿತ್ವದಲ್ಲಿದೆ. ನಿಜವಾಗಿಯೂ ಇವರಿಗೆ ಕಾರ್ಕಳ ಜನತೆ ಬಗ್ಗೆ ಕಾಳಜಿ ,ಗೌರವ ಇದ್ದರೆ ತಕ್ಷಣ ಟೋಲ್ ಸಂಗ್ರಹವನ್ನು ಹಿಂಪಡೆಯುವಂತೆ ಮಾಡುವ ಎದೆಗಾರಿಕೆ ತೋರಿಸಲಿ ಎಂದು ಬಿಜೆಪಿ ಹಿರಿಯ ಮುಖಂಡರಾದ ಸೂರ್ಯಕಾಂತ ಶೆಟ್ಟಿ ಕೆದಿಂಜೆ ಆಕ್ರೋಷ ವ್ಯಕ್ತ ಪಡಿಸಿದ್ದಾರೆ











