
ಉಡುಪಿ: ಜಿಲ್ಲಾಧಿಕಾರಿ ಡಾ|ಕೆ.ವಿದ್ಯಾಕುಮಾರಿ ಅವರು ರಾಷ್ಟ್ರೀಯ ಹೆದ್ದಾರಿ 169ರ ಮಾಳದಿಂದ ತನಿಕೋಡ್ ಗೇಟ್ ಮೂಲಕ ಎಸ್. ಕೆ ಬಾರ್ಡರ್ ವರೆಗೆ ಸುಮಾರು 30 km ವ್ಯಾಪ್ತಿಯಲ್ಲಿ ಘನವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳು ಕೊರ್ಕನಹಳ್ಳ, ಗಲ್ಗುಂಜಿ ಮನೆ ಸಮೀಪದ ಸೇತುವೆ ಶಿಥಿರಾವಸ್ಥೆಯಲ್ಲಿ ಇರುವುದರಿಂದ ಘನವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದು ಈ ರಸ್ತೆಯಲ್ಲಿ ಉಡುಪಿ ಜಿಲ್ಲೆಯಿಂದ ಬರುವ ವಾಹನಗಳು ಸಂಚಾರ ಮಾಡುವುದರಿಂದ ತನಿಕೋಡ್ ಗೇಟ್ನಿಂದ ಎಸ್ ಕೆ ಬಾರ್ಡರ್ ವರೆಗೂ ಅಧಿಕ ಭಾರದ ಸರಕು ಸಾಗಾಣಿಕ ವಾಹನಗಳಿಗೆ ನಿಷೇಧ ಹೊರಡಿಸಿದೆ.
ಹೀಗಾಗಿ ಚಿಕ್ಕಮಗಳೂರಿನಿಂದ ಬರುವಾಗ ಘನವಾಹನಗಳು ಬಾಳೆಹೊನ್ನೂರು-ಮಾಗುಂಡಿ- ಕಳಸ-ಕುದುರೆಮುಖ-ಎಸ್ ಕೆ ಬಾರ್ಡರ್ ಮಾರ್ಗವಾಗಿ ಹಾಗೂ ನರಸಿಂಹರಾಜಪುರ ಕಡೆಯಿಂದ ಬರುವ ಘನವಾಹನಗಳು ಕೊಪ್ಪ-ಜಯಪುರ-ಬಾಳೆಹೊಳೆ-ಕಳಸ-ಕುದುರೆಮುಖ-ಎಸ್ ಕೆ ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಸೂಚನೆ ನೀಡಿದೆ.











