
ಕಾರ್ಕಳ, ಡಿ.27: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಡಿಸೆಂಬರ್ 27 ರಂದು ಶನಿವಾರ ಸಂಜೆ 5.15 ಗಂಟೆಗೆ ಕಾರ್ಕಳ ಜ್ಞಾನಸುಧಾ ಆವರಣದಲ್ಲಿ ಜ್ಞಾನ ತೀರ್ಥ ವಿಠಲ’ ಸಂಗೀತ ಸಂಜೆ ನಡೆಯಲಿದೆ. ಖ್ಯಾತ ಕಲಾವಿದರಾದ ಪಂಡಿತ್ ಜಯತೀರ್ಥ ಮೇವುಂಡಿ, ನರೇಂದ್ರ ಎಲ್ ನಾಯಕ್, ಅಂಕುಶ್ ನಾಯಕ್, ಆಕಾಶ್, ಹೇಮಂತ್ ಜೋಷಿ, ಸೂರ್ಯಕಾಂತ್ ಸುರ್ವೆ, ರಾಜೇಶ್ ಭಾಗವತ್, ಅಶ್ವಥ್ ಶೆಣೈ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.





