
ವಿಜಯಪುರ: ಡಿ.ಕೆ ಶಿವಕುಮಾರ್ ಅವರಿಗೆ ಸದ್ಯದ ಪರಿಸ್ಥಿತಿ ಡೂ ಆರ್ ಡೈ ಆಗಿದೆ ಇದು ಅವರಿಗೆ ಕೊನೆಯ ಅವಕಾಶ. ಇನ್ನು ಮುಂದೆ ಕರ್ನಾಟಕದಲ್ಲಿ, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದೇ ಇಲ್ಲ ,ಇನ್ನು ಸಿದ್ದರಾಮಯ್ಯ ನವರ ಮಗನದು ವಸೂಲಿ ಕಂಪನಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಶಾಸಕರ ಪ್ರವಾಸ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಅಷ್ಟು ಸುಲಭದಲ್ಲಿ ಸಿಎಂ ಸ್ಥಾನ ಸಿಗುವುದಿಲ್ಲ. ಸಿದ್ದರಾಮಯ್ಯನವರ ಹಿಂದೆ ಸಾಕಷ್ಟು ಶಾಸಕರು ಇದ್ದಾರೆ. ಇನ್ನು ಅವರ ಮಗ ಯಡಿಯೂರಪ್ಪನವರ ಮಗ ವಿಜಯೇಂದ್ರನಂತೆಯೇ ವಸೂಲಿ ದಂಧೆಯಲ್ಲಿ ತೊಡಗಿದ್ದಾನೆ. ರಾತ್ರಿ ವಿಜಯೇಂದ್ರನ ಬಳಿ ನಕಲಿ ಸಹಿ ಮಾಡುವುದನ್ನು ಕಲಿಯುತ್ತಾನೆ ಎಂದು ಪ್ರತಿಕ್ರಿಸಿದ್ದಾರೆ.




