30.5 C
Udupi
Friday, February 27, 2026
spot_img
spot_img
HomeBlogಡಿಜಿಸಿಎ ಹೊಸ ನಿಯಮ: 48 ಗಂಟೆಯೊಳಗೆ ಟಿಕೆಟ್‌ ರದ್ದು/ಬದಲಾವಣೆ ಮಾಡಿದರೆ ರದ್ದತಿ ಶುಲ್ಕ ಇಲ್ಲ

ಡಿಜಿಸಿಎ ಹೊಸ ನಿಯಮ: 48 ಗಂಟೆಯೊಳಗೆ ಟಿಕೆಟ್‌ ರದ್ದು/ಬದಲಾವಣೆ ಮಾಡಿದರೆ ರದ್ದತಿ ಶುಲ್ಕ ಇಲ್ಲ

ನವದೆಹಲಿ : ಪ್ರಯಾಣಿಕರಿಂದ ಟಿಕೆಟ್‌ ರದ್ದತಿ, ಬದಲಾವಣೆ ಮತ್ತು ವಿಳಂಬವಾಗಿ ಮರುಪಾವತಿ ಕುರಿತು ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದೀಗ ಟಿಕೆಟ್‌ ಬುಕ್ಕಿಂಗ್‌ ಕುರಿತ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಅದರಲ್ಲಿ ಮುಖ್ಯವಾಗಿ ಇನ್ನು ಮುಂದೆ ವಿಮಾನ ಟಿಕೆಟ್‌ ಅನ್ನು ಬುಕ್‌ ಮಾಡಿದ 48 ಗಂಟೆ ಒಳಗೆ ಟಿಕೆಟ್‌ ರದ್ದು ಅಥವಾ ಬದಲಾವಣೆ ಮಾಡಿದರೆ ಏರ್‌ಲೈನ್ಸ್‌ ಸಂಸ್ಥೆಗೆ ಯಾವುದೇ ರದ್ದತಿ ಶುಲ್ಕ ಪಾವತಿಸಬೇಕಿಲ್ಲ ಎಂದು ಆದೇಶ ಹೊರಡಿಸಿದೆ.

ಇದೇ ವೇಳೆ, ಟಿಕೆಟ್ ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಪ್ರಯಾಣಿಕರು ದೋಷವನ್ನು ಎತ್ತಿ ತೋರಿಸಿದಾಗ, ವಿಮಾನಯಾನ ಸಂಸ್ಥೆಗಳು ಅದೇ ವ್ಯಕ್ತಿಯ ಹೆಸರಿನ ತಿದ್ದುಪಡಿಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು ಎಂದು ತಿಳಿಸಿದ್ದು ಈ ಎಲ್ಲಾ ವಿನಾಯ್ತಿಗಳು ಏರ್‌ಲೈನ್ಸ್‌ನ ವೆಬ್‌ಸೈಟ್‌ನಲ್ಲಿ ನೇರವಾಗಿ ಬುಕ್ ಮಾಡಿದ ಟಿಕೆಟ್‌ಗಳಿಗಷ್ಟೇ ಅನ್ವಯಿಸಲಿದೆ.

ಟಿಕೆಟ್ ಅನ್ನು ಟ್ರಾವೆಲ್‌ ಏಜೆಂಟ್‌ ಅಥವಾ ಪೋರ್ಟಲ್‌ ಮೂಲಕ ಖರೀದಿಸಿದ್ದರೆ ಶುಲ್ಕ ವಿಧಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರ ಏರ್‌ಲೈನ್ಸ್‌ ಸಂಸ್ಥೆಗಳಿಗೇ ಬಿಡಲಾಗಿದೆ. ಏಕೆಂದರೆ ಈ ಏಜೆಂಟರನ್ನು ಏರ್‌ಲೈನ್ಸ್‌ ಸಂಸ್ಥೆಗಳೇ ನೇಮಿಸಿರುತ್ತವೆ ಎಂದು ಡಿಜಿಸಿಎ ತಿಳಿಸಿದೆ.

ಇನ್ನು ಮುಂದೆ ಟಿಕೆಟ್‌ ರದ್ದತಿ ಬಳಿಕದ ರೀಫಂಡ್‌ ಅಥವಾ ಮರುಪಾವತಿ ಪ್ರಕ್ರಿಯೆ 14 ಕೆಲಸದ ದಿನದೊಳಗೆ ಪೂರ್ಣಗೊಳ್ಳಬೇಕು ಎಂದು ಷರತ್ತು ವಿಧಿಸಿದ್ದು ಜೊತೆಗೆ ವೈದ್ಯಕೀಯ ತುರ್ತು ವಿಚಾರಗಳಿಗೆ ಸಂಬಂಧಿಸಿದ ಟಿಕೆಟ್‌ ರದ್ದತಿ ವಿಚಾರದಲ್ಲೂ ಕೆಲ ಬದಲಾವಣೆಗಳನ್ನು ತರಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page