ಜೇಸಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರು,ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪುಷ್ಪಾರ್ಚನೆ

ಜೇಸೀಸ್ ಶಾಲೆಯ ಸ್ಥಾಪಕ ಅಧ್ಯಕ್ಷರು, ಖ್ಯಾತ ನ್ಯಾಯವಾದಿ ಬಿಜೆಪಿಯ ಹಿರಿಯ ಮುಖಂಡರಾದ ಎಂ. ಕೆ ವಿಜಯಕುಮಾರ್ ಕಳೆದ ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ. ಇವರ ಶ್ರದ್ಧಾಂಜಲಿಯನ್ನು ಜೇಸಿ ಶಾಲೆಯ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು, ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪುಷ್ಪಾರ್ಚನೆಯನ್ನು ಮಾಡುವುದರೊಂದಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿದ ಎಂ.ಕೆ ವಿಜಯ್ ಕುಮಾರ್ ಇವರ ಸಾಧನೆಯನ್ನು ವಿವರಿಸುತ್ತಾ, ಕಾರ್ಕಳದಲ್ಲೇ 48ನೇ ವರ್ಷಗಳ ಹಿಂದೆ ಮೊಟ್ಟಮೊದಲನೆಯದಾಗಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳ ಏಳಿಗೆಗೆ ಕಾರಣಕರ್ತರಾದರು ಎಂದು ಜೇಸಿ ಸಂಸ್ಥೆಯ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಇವರು ಸ್ಮರಿಸಿದರು. ಮೃತರ ಆತ್ಮಕ್ಕೆ ಸದ್ಗತಿಯನ್ನು ಸಿಗಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. ಶಾಲೆಗೆ ರಜೆಯನ್ನು ಘೋಷಿಸಲಾಯಿತು.
ಜೇಸಿ ಕಾರ್ಕಳದ ಅಧ್ಯಕ್ಷರಾದ ಜೇಸಿ ಶ್ವೇತಾ ಜೈನ್, ಜೇಸಿ ಶಿಕ್ಷಣ ಸಂಸ್ಥೆಯ ಕಾರ್ಕಳ ಇದರ ಕಾರ್ಯದರ್ಶಿ ಡಾll ಮುರುಳಿಧರ್ ಭಟ್, ಜೇಸಿ ಶಿಕ್ಷಣ ಸಂಸ್ಥೆಯ ಕಾರ್ಕಳ ಇದರ ಖಜಾಂಚಿ ಜೇಸಿ ದಿನೇಶ್ ಕೆ, ಜೇಸಿ ಶಿಕ್ಷಣ ಸಂಸ್ಥೆ ಕಾರ್ಕಳ ಇದರ ಪೂರ್ವಾಧ್ಯಕ್ಷರು ಜೇಸಿ ದಿವ್ಯಸ್ಮಿತಾ ಭಟ್ ಹಾಗೂ ಆಡಳಿತ ವರ್ಗದವರು ಉಪಸ್ಥಿತರಿದ್ದರು.




















