
ಮಂಗಳೂರು : ಜೇಸಿಐ ಭಾರತ ವಲಯ 15ರ ಅತ್ಯುತ್ತಮ ಘಟಕ ಅಧ್ಯಕ್ಷ ಪ್ರಶಸ್ತಿಯನ್ನು ಶ್ವೇತಾ ಎಸ್. ಜೈನ್ ಪಡೆದಿದ್ದಾರೆ.
52 ವರ್ಷಗಳ ಸುದೀರ್ಘ ಇತಿಹಾಸವಿರುವ ಜೆಸಿಐ ಕಾರ್ಕಳ ಘಟಕದ ಪ್ರಸಕ್ತ ವರ್ಷದ ಅಧ್ಯಕ್ಷೆ ಶ್ವೇತಾ ಎಸ್. ಜೈನ್ ಅವರು ಈ ವರ್ಷದಲ್ಲಿ ಮಾಡಿದಂತಹ ಅನೇಕ ಸಮಾಜಮುಖಿ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ತರಬೇತಿ ಕಾರ್ಯಕ್ರಮಗಳಿಗಾಗಿ ಜೆಸಿಐ ವಲಯ 15 ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್ ಅವಾರ್ಡ್ ಅನ್ನು ಪಡೆದುಕೊಂಡಿರುತ್ತಾರೆ. ಘಟಕವು ಜೇಸಿವೀಕ್ ವಿಭಾಗದಲ್ಲಿ ರನ್ನರ್, ಸ್ಪೋರ್ಟ್ಸ್ ವಿಭಾಗದಲ್ಲಿ ರನ್ನರ್, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ರನ್ನರ್ ಪ್ರಶಸ್ತಿಯನ್ನು ಪಡೆದಿದೆ. ಅದರೊಂದಿಗೆ ಪ್ರತಿಯೊಂದು ವಿಭಾಗದಲ್ಲೂ 25ಕ್ಕೂ ಹೆಚ್ಚು ಮನ್ನಣೆ ದೊರೆತಿದೆ.
ಅ. 18-19ರಂದು ಮಂಗಳೂರಿನ ಸ್ವಸ್ತಿಕ ವಾಟರ್ ಫ್ರಂಟ್‌ನಲ್ಲಿ ನಡೆದ ಜೇಸಿಐ ವಲಯ 15ರ ಕಹಳೆ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಅಭಿಲಾಶ್ ಬಿ. ಎ. ಅವರು ಶ್ವೇತಾ ಎಸ್. ಜೈನ್ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು. ಈ ಸಂಧರ್ಭ ಜೆಸಿಐ ಕಾರ್ಕಳ ಘಟಕದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.



















































