24.9 C
Udupi
Monday, January 26, 2026
spot_img
spot_img
HomeBlogಜೇಸಿಐ ಕಾರ್ಕಳ ಹಾಗೂ ಲೇಡಿ ಜೇಸಿ ವಿಂಗ್ ಕಾರ್ಕಳ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಜೇಸಿಐ ಕಾರ್ಕಳ ಹಾಗೂ ಲೇಡಿ ಜೇಸಿ ವಿಂಗ್ ಕಾರ್ಕಳ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಜೇಸಿಐ ಕಾರ್ಕಳ ಹಾಗೂ ಲೇಡಿ ಜೇಸಿ ವಿಂಗ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಜೆಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ, ಮಾನಸಿಕ ಒತ್ತಡ ನಿವಾರಣ ಚಟುವಟಿಕೆ, ಮಹಿಳಾ ಹಕ್ಕುಗಳು ಸಮಾನತೆ ಮತ್ತು ಸಬಲೀಕರಣದ ಬಗ್ಗೆ ತರಬೇತಿ, ಮಹಿಳೆಯರ ರ‍್ಯಾಲಿ , ಸಾಧಕ ಮಹಿಳೆಗೆ ಸನ್ಮಾನ, ಹಾಗೂ ಇನ್ನಿತರ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ರಾಜ್ ದೀಪವನ್ನು ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ: ಈ ಕಾರ್ಯಕ್ರಮವನ್ನು ಖ್ಯಾತ ಅಂತರಾಷ್ಟ್ರೀಯ ಕರಾಟೆ ತರಬೇತುದಾರರಾದ ಸತೀಶ್ ಬೆಳ್ಮಣ್ ಇವರು ಮಕ್ಕಳಿಗೆ ಮಾಹಿತಿ ನೀಡಿ ವಿಶ್ವ ಮಹಿಳಾ ದಿನಾಚರಣೆಗೆ ಶುಭವನ್ನು ಹಾರೈಸಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಮಕ್ಕಳಿಗೆ ಪ್ರಾತ್ಯಕ್ಷಿಕೆಯ ರೂಪದಲ್ಲಿ ಕಾರ್ಯಕ್ರಮವನ್ನು ನಡೆಸಿದರು.

ಮಹಿಳಾ ಹಕ್ಕುಗಳು ಸಮಾನತೆ ಮತ್ತು ಸಬಲೀಕರಣ ಬಗ್ಗೆ ತರಬೇತಿ: ಖ್ಯಾತ ವಕೀಲರಾದ ಸುರೇಶ್ ಪೂಜಾರಿಯವರು ಮಹಿಳಾ ಹಕ್ಕುಗಳ ಸಮಾನತೆಯ ಬಗ್ಗೆ ಸಬಲೀಕರಣದ ಬಗ್ಗೆ ಹಾಗೂ ಮಹಿಳೆಯರಿಗೆ ಇರುವ ಜವಾಬ್ದಾರಿಗಳು, ಮಹಿಳೆಯರ ಶೋಷಣೆ ಹಾಗೂ ಅನ್ಯಾಯಗಳ ಬಗ್ಗೆ ಹಾಗೂ ಮಕ್ಕಳನ್ನು ಬೆಳೆಸುವ ರೀತಿ, ಮಕ್ಕಳಿಗೆ ನಾವು ಸುಸಂಸ್ಕೃತ ಜೀವನ ಪಾಠದೊಂದಿಗೆ ಯಾವ ರೀತಿ ಅವರಿಗೆ ಮಾನಸಿಕವಾಗಿ ಪ್ರಭುದ್ಧರಾಗಿ ಬೆಳೆಯುವ ಸಂದರ್ಭ ಮಹಿಳೆಯರಾಗಿ ಅಥವಾ ಪೋಷಕರಾಗಿ ಕರ್ತವ್ಯಗಳ ಬಗ್ಗೆ ಬಹಳ ವಿಸ್ತಾರವಾಗಿ ಮಾಹಿತಿಯನ್ನ ನೀಡಿದರು.

ಮಾನಸಿಕ ಒತ್ತಡ ನಿವಾರಣ ಚಟುವಟಿಕೆ: ಜೇಸಿ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಿಗೆ ಕೆಲವೊಂದು ಆಕ್ಟಿವಿಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಯಾವಾಗಲೂ ಪಾಠ ದೊಂದಿಗೆ ಇರುವ ಶಿಕ್ಷಕರಿಗೆ ಹಾಗೂ ಪರೀಕ್ಷೆಗಳ ಒತ್ತಡದ ನಡುವೆ ಮನಸ್ಸಿಗೆ ಹಿತವಾಗುವಂತಹ ಆಟೊಗಳನ್ನು ನಡೆಸಲಾಯಿತು, ಜೆಸಿ ಸುಜಾತಾ ರಾಮಚಂದ್ರ ಇವರು ವಿನೂತನವಾಗಿ ಕಾರ್ಯಕ್ರಮವನ್ನು ನಡೆಸಿದರು.

ಮಹಿಳೆಯರ ರ‍್ಯಾಲಿ : ಉತ್ತಮ ಘೋಷ ವಾಕ್ಯದೊಂದಿಗೆ ಜೇಸಿಯ ಸದಸ್ಯರು ಹಾಗೂ ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರ ಬೈಕ್ ರ‍್ಯಾಲಿ . ಉತ್ತಮವಾದ ಸಂದೇಶದೊಂದಿಗೆ ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.

ಸಾಧಕ ಮಹಿಳೆಗೆ ಸನ್ಮಾನ: ಕೈ ಇದ್ದು ಸಾಧನೆ ಮಾಡುವುದು ಬೇರೆ, ಕೈ ಇಲ್ಲದೆ ಸಾಧನೆ ಮಾಡೋದು ಬೇರೆ . ಎರಡು ಕೈಗಳನ್ನು ಕಳೆದುಕೊಂಡ ಬ್ಯಾಂಕ್ ಉದ್ಯೋಗಿ ತನ್ನ ಜೀವನವನ್ನು ತಾನು ಬಹಳಷ್ಟು ಅಚ್ಚುಕಟ್ಟಾಗಿ ರೂಪಿಸಿ ಮನೆಯನ್ನು ಸ್ವಂತವಾಗಿ ಕಟ್ಟಿ ಇತರ ಮಹಿಳೆಗೆ ಮಾದರಿಯಾಗಿ ಸಾಧನೆಯನ್ನು ಮಾಡಿದ್ದಾರೆ ಹಾಗೂ ಇವರು ಬಹುಮುಖ ಪ್ರತಿಭೆಯಾಗಿದ್ದು ಚಲನಚಿತ್ರಗಳಲ್ಲಿ ಕೂಡ ಅಭಿನಯವನ್ನು ಮಾಡಿರುತ್ತಾರೆ. ಸಾಧಕೀ ಮಾಲಿನಿ ಭಂಡಾರಿ ಅವರನ್ನು ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ ಸಾಧಕ ಮಹಿಳೆಯಾಗಿ ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.

ಕೇಕ್ ನೊಂದಿಗೆ ಮಹಿಳಾ ದಿನಾಚರಣೆಯ ಆಚರಣೆ :
ಇತರರಿಗೆ ಮಾದರಿ ಹಾಗೂ ಪ್ರೇರಣಾ ಶಕ್ತಿಯಾಗಿ ಇರುವ ಮಹಿಳೆಯರ ದಿನ ದಂದು, ಲೇಡಿ ಜೇಸಿ ಸದಸ್ಯರೆಲ್ಲರೂ ಸೇರಿ ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ಕೇಕ್ ಕತ್ತರಿಸಿ ಅಲ್ಲಿ ಇರುವ ಎಲ್ಲಾ ಗ್ರಾಹಕರೊಂದಿಗೆ ಮಹಿಳೆಯರ ದಿನಾಚರಣೆಯ ಸಂಭ್ರಮಾಚರಣೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷರು ಜೇಸಿ ಶ್ವೇತಾ ಎಸ್ ಜೈನ್, ಕಾರ್ಯದರ್ಶಿ ಜೇಸಿ ಸುಷ್ಮಿತಾ ರಾವ್, ಲೇಡಿ ಜೇಸಿ ನಿರ್ದೇಶಕಿ ಜೇಸಿ ಶಾಹಿನ್ ರಿಜ್ವಾನ್ ಖಾನ್, ಜೂನಿಯರ್ ಜೆಸಿ ಸಂಯೋಜಕರಾದ ಜೆಸಿ ಸುಜಾತಾ ರಾಮಚಂದ್ರ ಪೂರ್ವ ಅಧ್ಯಕ್ಷರಾದ ಜೇಸಿ ದಿವ್ಯಸ್ಮಿತ ಭಟ್, ಜೇಸಿ ಶಗುಫ್ತಾ ಖಾನ್ ಸದಸ್ಯರಾದ ಪ್ರಿಯಾ ನವಿನ್ ಲೋಬೊ, ಮಂಜುಳಾ ದಿನೇಶ್ ,ಶಿಲ್ಪಾ ಸುದರ್ಶನ್ ಇತರ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page