ವೃತ್ತಿ ಕೌಶಲ್ಯದ ತರಬೇತಿ ಹಾಗೂ ಪರಿಣಾಮಕಾರಿ ನಾಯಕತ್ವ ತರಬೇತಿ ಕಾರ್ಯಕ್ರಮ

ಜೆಸಿಐ ಕಾರ್ಕಳ, ಲೇಡಿ ಜೇಸಿ ವಿಂಗ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ, ವೃತ್ತಿ ಕೌಶಲ್ಯದ ತರಬೇತಿ ಹಾಗೂ ಪರಿಣಾಮಕಾರಿ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಯಿತು.
ಮೆಹೆಂದಿ ತರಬೇತಿಯನ್ನು ಜೆಸಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು
ತರಬೇತಿಯನ್ನು ಶಾಹೀನ್ ರಿಜ್ವಾನ್ ಖಾನ್ ಯಶಸ್ವಿಯಾಗಿ ನಡೆಸಿ ಕೊಟ್ಟರು.
ಅದರ ಬಗ್ಗೆ ತಿಳಿಸಿದ ಅವರು ನಮ್ಮ ದೇಶದಲ್ಲಿ ಮೆಹಂದಿ ಬಗ್ಗೆ ಅನೇಕ ನಂಬಿಕೆಗಳಿವೆ. ಮದುವೆಯಷ್ಟೇ ಅಲ್ಲದೇ, ಇನ್ನಿತರ ಶುಭ ಸಮಾರಂಭಗಳಲ್ಲಿ ಸಹ ಮಹಿಳೆಯರು ಮದರಂಗಿ ಹಚ್ಚಿಕೊಳ್ಳುವ ಸಂಪ್ರದಾಯವಿದೆ. ಹಬ್ಬ ಹರಿದಿನಗಳಲ್ಲಿ, ಮದುವೆ, ಶುಭ ಸಂದರ್ಭಗಳಲ್ಲಿ ಮೆಹಂದಿ ಕೈ ಗೆ ಹಚ್ಚುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುತ್ತಿದ್ದ ಮೆಹೆಂದಿಯನ್ನು ಇತ್ತೀಚಿನ ದಿನಗಳಲ್ಲಿ, ಹುಡುಗಿಯರು ಮತ್ತು ಮಹಿಳೆಯರು ವೃತ್ತಿಪರರ ಸಹಾಯದಿಂದ ಸುಂದರವಾದ ವಿನ್ಯಾಸಗಳನ್ನು ತಮ್ಮ ಕೈಗಳಿಗೆ ಹಚ್ಚಿ ಸಂತೋಷ ಪಡುತ್ತಾರೆ.ಭಾರತೀಯ, ಅರೇಬಿಕ್,ಆಫ್ರಿಕನ್ ಮತ್ತು ಪಾಕಿಸ್ತಾನಿ ಮೆಹೆಂದಿ ವಿನ್ಯಾಸಗಳು ಹೆಚ್ಚು ಪ್ರಸಿದ್ಧವಾಗಿವೆ. ಇದು ದೇಹಕ್ಕೆ ತಂಪು ಬೀರುವುದರಿಂದ ಒತ್ತಡವನ್ನು ಕಡಿಮೆ ಮಾಡುತ್ತದೆಯಂದು ತಿಳಿಸಿದರು.
ಜೆಸಿ ಮತ್ತು ಜೆಸಿ ಯೇತರ ಮಹಿಳಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದರು.
ವಲಯ ತರಬೇತಿದಾರರಾದ JFS ದಿನೇಶ್ ರವರು , ಡಾ ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಾರ್ಕಳ ಇಲ್ಲಿಯ ವಿದ್ಯಾರ್ಥಿನಿಯರಿಗೆ ಪರಿಣಾಮಕಾರಿ ನಾಯಕತ್ವದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ನೆರವೇರಿಸಿದರು. ಉತ್ತಮ ನಾಯಕ ಹೇಗಿರಬೇಕು ಹಾಗೂ ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಜೆಸಿ ನಿರ್ದೇಶಕಿ ಜೆಎಫ್‌ಎಂ ಶಾಹೀನ್ ರಿಜ್ವಾನ್ ಖಾನ್, ಘಟಕದ ಪೂರ್ವ ಅಧ್ಯಕ್ಷರಾದ ದಿವ್ಯಸ್ಮಿತ ಭಟ್ , ಜೆಸಿ ರೇವತಿ ಶೆಟ್ಟಿ, ಹಾಗೂ ಲೇಡಿ ಜೆಸಿ ಸದಸ್ಯರು ಹಾಸ್ಟೆಲ್ ವಾರ್ಡನ್ ಚೇತನಾ ಶೆಟ್ಟಿ ಉಪಸ್ಥಿತರಿದ್ದರು.