28.5 C
Udupi
Monday, April 13, 2026
spot_img
spot_img
HomeBlogಜಿಲ್ಲೆಯ 5 ಗ್ರಾಮ ಪಂಚಾಯಿತಿಗಳನ್ನು ಸೋಲಾರ್ ಪಂಚಾಯಿತಿಗಳಾಗಿ ರೂಪಿಸಲು ಶಿಫಾರಸು ಮಾಡಲಾಗಿದೆ: ಸಂಸದ ಕೋಟ ಶ್ರೀನಿವಾಸ್...

ಜಿಲ್ಲೆಯ 5 ಗ್ರಾಮ ಪಂಚಾಯಿತಿಗಳನ್ನು ಸೋಲಾರ್ ಪಂಚಾಯಿತಿಗಳಾಗಿ ರೂಪಿಸಲು ಶಿಫಾರಸು ಮಾಡಲಾಗಿದೆ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಮಣಿಪಾಲ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ಮಾದರಿ ಸೋಲಾರ್ ಪಂಚಾಯತ್ ಗಳಾಗಿ ರೂಪಿಸಲು ಜಿಲ್ಲೆಯ 5 ಗ್ರಾಮ ಪಂಚಾಯಿತಿಗಳನ್ನು ಮೆಸ್ಕಾಂಗೆ ಶಿಫಾರಸು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೋಟತಟ್ಟು, ಬೈಂದೂರಿನ ಕಿರಿಮಂಜೇಶ್ವರ, ಕಾರ್ಕಳದ ನಿಟ್ಟೆ, ಕಾಪುವಿನ ಮಜೂರು ಹಾಗೂ ಉಡುಪಿಯ ಉಪ್ಪೂರು ಗ್ರಾಮ ಪಂಚಾಯಿತಿಗಳನ್ನು ಶಿಫಾರಸು ಮಾಡಲಾಗಿದೆ. ಪ್ರಧಾನಮಂತ್ರಿ ಸೂರ್ಯ ಗ್ರಹಣ ಯೋಜನೆಯಡಿ ಮನೆಮನೆಯಲ್ಲೂ ವಿದ್ಯುತ್ ಉತ್ಪಾದಿಸಿಕೊಳ್ಳಲು 300 ಯೂನಿಟ್ ವಿದ್ಯುತ್ ಉತ್ಪಾದನೆ ಗುರಿಯೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳು 2.20 ಲಕ್ಷ ರೂ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಸೋಲಾರ್ ಅಳವಡಿಕೆ ಮಾಡಿಕೊಂಡ ಕುಟುಂಬಗಳಿಗೆ 78,000 ಸಬ್ಸಿಡಿ ನೀಡಲಾಗುತ್ತಿದೆ.

ಪ್ರಥಮ ಹಂತದಲ್ಲಿ ಆಯ್ಕೆ ಮಾಡಲಾದ 5 ಪಂಚಾಯತ್ ಗಳ ಪ್ರಗತಿ ಪರಿಗಣಿಸಿ ಎರಡನೇ ಹಂತದಲ್ಲಿ ಇನ್ನುಳಿದ ಪಂಚಾಯಿತಿಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page