23.4 C
Udupi
Tuesday, December 23, 2025
spot_img
spot_img
HomeBlogಜಿಲ್ಲೆಯ ಜನರ ಸಂಸ್ಕೃತಿ ಪ್ರೀತಿ ಇತರರಿಗೂ ಮಾದರಿ: ಡಾ. ಮುದ್ದು ಮೋಹನ್

ಜಿಲ್ಲೆಯ ಜನರ ಸಂಸ್ಕೃತಿ ಪ್ರೀತಿ ಇತರರಿಗೂ ಮಾದರಿ: ಡಾ. ಮುದ್ದು ಮೋಹನ್

ಅವಿಭಜಿತ ದ.ಕ. ಜಿಲ್ಲೆಯ ಜನತೆಯೂ ಕಲೆ, ಸಂಸ್ಕೃತಿ, ಸಂಗೀತವನ್ನು ಆರಾಧಿಸುವವರಾಗಿದ್ದು ಕಲಾವಿದರಿಗೆ ಅವರು ನೀಡುವ ಗೌರವ, ಪ್ರೋತ್ಸಾಹ ಬೇರೆಲ್ಲೂ ಕಾಣಸಿಗದು. ಈ ಜಿಲ್ಲೆಯ ಜನರ ಪ್ರೀತಿ, ಹೃದಯ ಶ್ರೀಮಂತಿಕೆಗೆ ನಾನು ಮಾರು ಹೋಗಿದ್ದೇನೆ ಎಂಬುದಾಗಿ ಕರ್ನಾಟಕ ಕಲಾಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ನಿವೃತ್ತ ಉಡುಪಿಯ ಜಿಲ್ಲಾಧಿಕಾರಿಗಳೂ ಆಗಿರುವ ಡಾ. ಮುದ್ದು ಮೋಹನ್ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕಾಂತಾವರ ಕನ್ನಡ ಸಂಘದ ೫೦ರ ಸಂಭ್ರಮದ ಪ್ರಯುಕ್ತ ಕಾರ್ಕಳದ ಶಾಸ್ತ್ರೀಯ ಸಂಗೀತ ಸಭಾದ ಸಹಯೋಗದಲ್ಲಿ ಅವರಿಂದ ಡಿ.೨೦ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಭವನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ಮುನ್ನ ಅವರು ಮಾತನಾಡಿದರು.


ಶಾಸ್ತ್ರೀಯ ಸಂಗೀತ ಸಭಾ ಇದರ ಸ್ಥಾಪಕ ಕಾರ್ಯದರ್ಶಿಗಳಾದ ಡಾ. ಪ್ರಕಾಶ್ ಶೆಣೈಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಮುದ್ದು ಮೋಹನ್ ಅವರಿಗೆ ಸಹ ವಾದ್ಯ ಸಹಾಯಕರಾಗಿ ಹಾರ್ಮೋನಿಯಂ ನಲ್ಲಿ ಪಂಚಾಕ್ಷರಿ ಹಿರೇಮಠ, ತಬಲಾದಲ್ಲಿ ಕೇಶವ ಜೋಶಿ ಬೆಂಗಳೂರು, ವಯಲಿನ್ ನಲ್ಲಿ ಶ್ರೀ ಟಿ.ರಂಗ ಪೈ, ತಂಬೂರಿಯಲ್ಲಿ ಉಡುಪಿಯ ಸಪ್ನಾರಾಜ್ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಐದು ಕಲಾವಿದರನ್ನು ಕೂಡಾ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಶ್ರೀಮತಿ ಮಿತ್ರಪ್ರಭಾ ಹೆಗ್ಡೆ, ದಿವಾಕರ್ ಕುಮಾರ್, ರತ್ನಾಕರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು. ಸದಾನಂದ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಸ್ವಾಗತಿಸಿ, ನಿತ್ಯಾನಂದ ಪೈ ವಂದಿಸಿದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page