26.7 C
Udupi
Monday, March 16, 2026
spot_img
spot_img
HomeBlogಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡು ದೇವಾಡಿಗ ಇವರಿಗೆ ಕಾರ್ಕಳ ಬಿಜೆಪಿ ವತಿಯಿಂದ ಸನ್ಮಾನ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡು ದೇವಾಡಿಗ ಇವರಿಗೆ ಕಾರ್ಕಳ ಬಿಜೆಪಿ ವತಿಯಿಂದ ಸನ್ಮಾನ

ಸ್ಯಾಕ್ಸೋಫೋನ್ ವಾದನದಲ್ಲಿ ವಿಶೇಷ ಸಾಧನೆ ಮಾಡಿರುವ ಕಾರ್ಕಳ ಅನಂತಶಯನ ತೋಟದ ಮನೆಯ ಪಾಂಡು ದೇವಾಡಿಗ ಇವರಿಗೆ ಕಾರ್ಕಳ ಬಿಜೆಪಿ ವತಿಯಿಂದ ಗೌರವಾನ್ವಿತ ಶಾಸಕರಾದ ವಿ ಸುನಿಲ್ ಕುಮಾರ್ ಇವರ ಸಮಕ್ಷಮದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ನೆರವೇರಿಸಿದ ಶಾಸಕರು ಮಾತನಾಡಿ ಪಾಂಡು ದೇವಾಡಿಗರ ಸಾಧನೆಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ, ಶಿಷ್ಯ ವೃಂದ ಇನ್ನಷ್ಟು ಸಂಖ್ಯೆಯಲ್ಲಿ ಹೆಚ್ಚಾಗಿ ಕಲೆ ಬೆಳೆಯಲಿ ಎಂದು ಶುಭಹಾರೈಸಿದರು.

ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷರಾದ ನಿರಂಜನ್ ಜೈನ್ ತಾಲೂಕು ಬಿಜೆಪಿ ಉಪಾಧ್ಯಕ್ಷರಾದ ಅನಂತಕೃಷ್ಣ ಶೆಣೈ, ತಾಲೂಕು ವಕ್ತಾರ ರವೀಂದ್ರ ಮೊಯಿಲಿ, ಮಾಜಿ ಪುರಸಭಾ ಉಪಾಧ್ಯಕ್ಷರಾದ ಟಿ. ಗಿರಿಧರ್ ನಾಯಕ್, ಬಿಜೆಪಿಯ ಹಿರಿಯರಾದ ಪ್ರಕಾಶ್ ರಾವ್, ಪುರಸಭಾ ಸದಸ್ಯರಾದ ಪ್ರದೀಪ್ ರಾಣೆ, ಶ್ರೀಮತಿ ಮಮತಾ, ನಗರ ಪ್ರಧಾನಕಾರ್ಯದರ್ಶಿ ವಿಘ್ನೇಶ್ ಪ್ರಸಾದ್, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ, ವಾರ್ಡ್ ಅಧ್ಯಕ್ಷರಾದ ಧೀರಜ್ ರಾವ್, ಮಾಜಿ ಪುರಸಭಾ ಸದಸ್ಯರಾದ ಸುನಿಲ್ ಕೋಟ್ಯಾನ್, ಅವಿನಾಶ್ ಶೆಟ್ಟಿ, ತೋಟದ ಮನೆಯ ನಿವಾಸಿಗಳು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page