21.9 C
Udupi
Sunday, February 15, 2026
spot_img
spot_img
HomeBlogಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಶ್ರೀ ದಿವಾಕರ್ ಪೂಜಾರಿ ನಿಧನ,ಅತ್ಯಂತ ದುಃಖದ ವಿಚಾರ

ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಶ್ರೀ ದಿವಾಕರ್ ಪೂಜಾರಿ ನಿಧನ,ಅತ್ಯಂತ ದುಃಖದ ವಿಚಾರ

spot_imgspot_img

ಶಾಸಕ
ವಿ.ಸುನಿಲ್ ಕುಮಾರ್ ಸಂತಾಪ

ಜಾರಿಗೆ ಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಶ್ರೀ ದಿವಾಕರ್ ಪೂಜಾರಿ ಯವರು ಇಂದು ನಿಧನರಾಗಿರುವುದು ಅತ್ಯಂತ ದುಃಖದ ವಿಚಾರ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ಶ್ರೀಯುತರು ಅಪಾರವಾದ ಕೊಡುಗೆಯನ್ನು ನೀಡಿ, ಧಾರ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಕಾರ್ಕಳದ ಮುಂಡ್ಕೂರಿನ ಜಾರಿಗೆಕಟ್ಟೆಯಲ್ಲಿ ಶ್ರೀಯುತರ ನೇತೃತ್ವದಲ್ಲಿ ಕೊರಗಜ್ಜ, ಕೊರಗರ ಪಂಜುರ್ಲಿ ಸಹಿತ ವಿವಿಧ ಪರಿವಾರ ಶಕ್ತಿಗಳ ಪುಣ್ಯ ಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಿದ್ದು ಕ್ಷೇತ್ರದಲ್ಲಿ ಕೋಲ,ಅಗೇಲು ಸೇವೆಗಳು ನಿರಂತರವಾಗಿ ನಡೆಯುತ್ತಿದ್ದವು.

ಅಗಲಿದ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬ ವರ್ಗ ಜೊತೆಗೆ ಅಪಾರ ಭಕ್ತ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ಶಾಸಕ ವಿ.ಸುನಿಲ್‌ ಕುಮಾರ್ ಸಂತಾಪ ಸೂಚಿಸಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page