
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಗುರುಪೂರ್ಣಿಮೆ ಹಾಗೂ ಆಷಾಡ ಮಾಸದ ವಿಶೇಷತೆಯ ಕುರಿತು ಕಾರ್ಯಕ್ರಮ ಪೆರ್ವಾಜೆ ಶಾಲೆಯಲ್ಲಿ ನಡೆಯಿತು. ವಸುಧಾ ಶೆಣೈಯವರು ಆಷಾಡ ಮಾಸದ ವಿಶೇಷತೆಯ ಕುರಿತು ಮಾತನಾಡಿದರು. ಗುರು ಪೂರ್ಣಿಮೆಯ ಕುರಿತು ಸಾವಿತ್ರಿ ಮನೋಹರ ಮಾತನಾಡಿದರು. ಗುರು ಪೂರ್ಣಿಮೆಯ ಅಂಗವಾಗಿ ಡಾಕ್ಟರೇಟ್ ಪದವಿಯನ್ನು ಪಡೆದ ಸದಸ್ಯೆಯರಾದ ಡಾ.ಸುಮತಿ.ಪ್ರಭು ಹಾಗೂ ಡಾ. ಮಾಲತಿ. ಜಿ. ಪೈಯವರನ್ನು ಸನ್ಮಾನಿಸಲಾಯಿತು. ರೂಪ ಚಿಪ್ಲೂಂಕರ್ ಪ್ರಾರ್ಥಿಸಿ, ಜಾಗೃತಿಯ ಅಧ್ಯಕ್ಷೆ ಪ್ರೊ. ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ, ಸುಲೋಚನ ಬಿ.ವಿ ಧನ್ಯವಾದವನ್ನಿತ್ತರು. ಶೈಲಜಾ ಹೆಗ್ಡೆ ನಿರೂಪಿಸಿದರು