
ಉಡುಪಿ/ಮಂಗಳೂರು: ಮಂಗಳವಾರ ಮಧ್ಯಾಹ್ನ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಮಾರಣಹೋಮದಲ್ಲಿ ಅನೇಕ ಪ್ರವಾಸಿಗರು ಬಲಿಯಾಗಿದ್ದು ಇದೀಗ ಜಿಲ್ಲಾಡಳಿತವು ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ಪ್ರವಾಸಿಗರ ಮಾಹಿತಿ ಸಲ್ಲಿಸುವಂತೆ ಟೂರ್ ಆಪರೇಟರ್ & ಟ್ರಾವೆಲ್ ಏಜೆಂಟ್ಸ್ ಗೆ ಸೂಚನೆ ನೀಡಿದೆ.
ಈ ಕುರಿತು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರ ಕಚೇರಿ ಪ್ರಕಟಣೆ ಹೊರಡಿಸಿದ್ದು ರಾಜ್ಯದ ಪ್ರವಾಸಿ ಕಾರ್ಯಚರಣೆದಾರರು ತಮ್ಮ ಮೂಲಕ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರ, ಪ್ರವಾಸಿಗರ ಸಂಬಂಧಿಕರು ಅಥವಾ ಪರಿಚಯಸ್ಥರು ಪ್ರವಾಸಕ್ಕೆ ತೆರಳಿರುವವರ ವಿವರಗಳನ್ನು ಸಹಾಯವಾಣಿ ಸಂಖ್ಯೆ 080- 43344334, 080-43344335, 080-43344336, 080-43344342 ಗೆ ನೀಡುವಂತೆ ತಿಳಿಸಿದೆ.




