
ದಿನಾಂಕ 26.4.2025 ನೇ ಶನಿವಾರದಂದು ಬೆಳಗ್ಗೆ 9: 30ರ ವೇಳೆಗೆ ಕಾರ್ಕಳದ ಕಾಬೆಟ್ಟುವಿನಲ್ಲಿ ಚೋಲ್ಪಾಡಿ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದ ಶಿಲನ್ಯಾಸ ಕಾರ್ಯಕ್ರಮ ಹಾಗೂ ಎಂ.ಆರ್.ಪಿ.ಎಲ್ ಸಹಯೋಗದಿಂದ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯದ ಲೋಕಾರ್ಪಣೆ ನಡೆಯಲಿದೆ.
ವಿ ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ನಾಡೋಜ ಡಾ. ಜಿ ಶಂಕರ್, ರಾಘವೇಂದ್ರ ಉಪಾಧ್ಯಾಯ, ಮುನಿಯಲು ಉದಯಕುಮಾರ ಶೆಟ್ಟಿ, ಎಂ.ಕೆ ವಿಜಯಕುಮಾರ್, ಯೋಗೀಶ ದೇವಾಡಿಗ, ಸುಂದರ್ ಹೆಗ್ಡೆ, ಶ್ರೀಮತಿ ರೆಹಮತ್, ಡಾ. ಶ್ರೀದೇವಿಪ್ರಸಾದ್ ಶೆಟ್ಟಿ ಬೆಳಪು, ಬೋಳ ಪ್ರಭಾಕರ್ ಕಾಮತ್, ಸಂಕೇತ್ ಉಪಾಧ್ಯಾಯ ಹಾಗೂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.




