
ಪ್ರಯಾಣಿಕರ ಬಸ್ಸು ತಂಗುದಾಣ ಸ್ವಚ್ಛತಾ ಕಾರ್ಯಕ್ರಮ.
ಸಾರ್ವಜನಿಕ ಹಿಂದು ರುದ್ರ ಭೂಮಿ ವ್ಯವಸ್ಥಾಪನಾ ಸಮಿತಿ ಕರಿಯಕಲ್ಲು ಕಾರ್ಕಳ, ಹಾಗೂ ರೋಟರಿ ಕ್ಲಬ್ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ , ಜೋಡುಕಟ್ಟೆ, ಪುಲ್ಕೇರಿ ಬೈಪಾಸ್,ಕುಂಟಲ್ಪಾಡಿ ,ಆನೆಕೆರೆ,ಅನಂತಶಯನ,ಮಾರ್ಕೆಟ್ SVT ವೃತ್ತ, ಕಾಬೆಟ್ಟು,ಕುಕ್ಕುಂದೂರು ಜಯಂತಿನಗರ , ಬಂಡಿಮಠ ಮೊದಲಾದ ಕಡೆಗಳಲ್ಲಿ ಬಸ್ಸು ತಂಗುದಾಣದಲ್ಲಿ ಸ್ವಚ್ಚತಾ ಕಾರ್ಯಕ್ರಮವು ಜರುಗಿತು.
ಈ ಸಂದರ್ಭದಲ್ಲಿ ಕರಿಯಕಲ್ಲು ಹಿಂದೂ ರುದ್ರಭೂಮಿ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಪ್ರಕಾಶ್ ರಾವ್, ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ರೋ.ನವೀನ್ ಚಂದ್ರ ಶೆಟ್ಟಿ,ಕಾರ್ಯದರ್ಶಿ ರೋ.ಚೇತನ್ ನಾಯ್ಕ್ , ರೋ.ಇಕ್ಬಾಲ್ ಅಹ್ಹಮದ್,ರೋ.ಸುರೇಶ್ ನಾಯಕ್,ರೋ. ಬಾಲಕೃಷ್ಣ ದೇವಾಡಿಗ, ರೋ.ಹರಿಪ್ರಕಾಶ್ ಶೆಟ್ಟಿ, ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಹಿರಿಯ ಆರೋಗ್ಯ ನಿರೀಕ್ಷಕರು ಲೈಲಾ ಥೋಮಸ್, ಸಂತೋಷ್ ರಾವ್, ಉದ್ಯಮಿ ಸುರೇಶ್ ಕೋಟ್ಯಾನ್,ನಾಗೇಶ್ ರಾವ್, ಸತೀಶ್ ರಾವ್, ಧೀರಜ್ ರಾವ್,ಆದಿತ್ಯ ರಾವ್,ವಿನೀತ್ ರಾವ್, ಭುವನ್,ಕಿಯಾನ್,ವಿಘ್ನೇಶ್ ರಾವ್ ,ಮೊದಲಾದವರು ಉಪಸ್ಥಿತರಿದ್ದರು.



















