30.5 C
Udupi
Sunday, January 25, 2026
spot_img
spot_img
HomeBlogಕ್ರೈಸ್ ಕಿಂಗ್ : ಅದ್ದೂರಿಯಾಗಿ ಜರುಗಿದ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕ್ರೈಸ್ ಕಿಂಗ್ : ಅದ್ದೂರಿಯಾಗಿ ಜರುಗಿದ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ


ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಹಾಗೂ ಹಿರಿಯ ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮವು ಜ.23 ಹಾಗೂ 24 ರಂದು ಸಂಸ್ಥೆಯ ನೂತನ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಜ.23 ರಂದು ನಡೆದ ಕಿರಿಯ ವಿಭಾಗದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಮಿಯ್ಯಾರು ಚರ್ಚಿನ ಧರ್ಮಗುರುಗಳಾದ ರೆ| ಫಾ| ಕೆನ್ಯೂಟ್ ಬರ್ಬೋಜರವರು ಆಗಮಿಸಿದ್ದರು. ಇವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ “ಮಕ್ಕಳ ಮೇಲೆ ಯಾವುದೇ ಒತ್ತಡ ಹೇರದೆ ಬಾಲ್ಯವನ್ನು ಸಂತೋಷದಿAದ ಕಳೆಯುವ ವಾತಾವರಣ ರೂಪಿಸುವುದು ಹೆತ್ತವರ ಆದ್ಯ ಕರ್ತವ್ಯ. ಮಕ್ಕಳನ್ನು ಸಂತೋಷದಲ್ಲಿ ಇರಿಸಿ, ಸಂತೋಷದಿAದ ಗೆಲ್ಲಿ” ಎಂದು ಹೇಳಿದರು. ಅತಿಥಿಯಾಗಿ ಆಗಮಿಸಿದ್ದ ಮಹಾತ್ಮಗಾಂಧಿ ಪ್ರೌಢಶಾಲೆ ಕುಕ್ಕುಂದೂರಿನ ಮುಖ್ಯಶಿಕ್ಷಕರಾದ ಸಂಜೀವ ಪೂಜಾರಿ ಹಾಗೂ ಸರಕಾರಿ ಪ್ರೌಢಶಾಲೆ ಮಾಳ ಚೌಕಿಯಂಗಡಿ ಮುಖ್ಯಶಿಕ್ಷಕರಾದ ಶ್ರೀಯುತ ಆನಂದ್ ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಹಿರಿಯ ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವದಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಡಾನ್ ಬೋಸ್ಕೋ ಪ್ರೌಢಶಾಲೆ ಮುಲ್ಲಡ್ಕದ ಪ್ರಾಂಶುಪಾಲರಾದ ರೆ| ಫಾ| ಮಿಲ್ಟನ್ ಫೆರ್ನಾಂಡಿಸ್ ವರು ಮಾತನಾಡಿ “ನಮ್ಮ ಯೋಜನೆಗಳು ಮಾತುಗಳಾಗಿ, ನಂತರ ಕಾರ್ಯಗಳಾಗಿ, ವರ್ತನೆಯಾಗಿ ರೂಪುಗೊಳ್ಳುತ್ತವೆ. ಮಕ್ಕಳು ಹಿರಿಯರ ಮಾಥು ವರ್ತನೆಗಳನ್ನು ಗಮನಿಸುತ್ತಾರೆ. ಆದ್ದರಿಂದ ಮಕ್ಕಳ ಮುಂದೆ ನಮ್ಮ ವರ್ತನೆ ಉತ್ತಮವಾಗಿರಲಿ” ಎಂದು ಹೇಳಿದರು. ಇನ್ನೋರ್ವ ಅತಿಥಿ ಗೋಲ್ಡನ್ ಬುಕ್ ಆಫ್ ವರ್ಲ್ ರೆಕಾರ್ಡ್ ಸಾಧಕ ಹಾಗೂ ಸಂಸ್ಥೆಯ ಸಂಗೀತ ಶಿಕ್ಷಕರಾದ ವಿದ್ವಾನ್ ಯಶವಂತ್ ಎಂ. ಜಿ ಮಾತನಾಡುತ್ತಾ “ಅಹಂಕಾರವನ್ನು ತ್ಯಜಿಸಿ, ಜ್ಞಾನದಾಹಿಯಾಗಿ ನಿರಂತರ ಅಧ್ಯಯನದಲ್ಲಿ ತೊಡಗಿಕೊಂಡು ತಂದೆ, ತಾಯಿ ಹಾಗೂ ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಯಿರಿ” ಎಂದು ಹೇಳಿದರು. ಇನ್ನೋರ್ವ ಅತಿಥಿ ನಕ್ರೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ಹೆಗ್ಡೆಯವರು ಮಾತನಾಡಿ “ಮಕ್ಕಳಿಗಾಗಿ ಆಸ್ತಿ ಮಾಡದೆ, ಮಕ್ಕಳನ್ನೇ ಆಸ್ತಿಯನ್ನಾಗಿಸುವುದು ನಮ್ಮ ಕರ್ತವ್ಯ” ಎಂದರು. ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಆವೆಲಿನ್ ಲೂಯಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೊರವರು ವಾರ್ಷಿಕ ವರದಿಯನ್ನು ವಾಚಿಸಿದರು. ಸಂಸ್ಥೆಯ ಆಪ್ತ ಸಮಾಲೋಚಕಿಯಾಗಿರುವ ಡಾ| ಸಿಸ್ಟರ್ ಶಾಲೆಟ್ ಸಿಕ್ವೇರಾ, ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಲಕ್ಷಿ÷್ಮÃನಾರಾಯಣ ಕಾಮತ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಜೋಸ್ನಾ ಸ್ನೇಹಲತಾ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತ ಹಾಗೂ ಪ್ರಾಥಮಿಕ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉದಯರವಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಸಂಸ್ಥೆಯ ಯಕ್ಷಗಾನ ವಿದ್ಯಾರ್ಥಿಗಳಿಂದ ಮಹಿಷಮರ್ದಿನಿ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಕಿರಿಯ ವಿಭಾಗದ ವಾರ್ಷಿಕೋತ್ಸವದಂದು ಶ್ರೀಮತಿ ದೀಪ್ತಿ ಸ್ವಾಗತಿಸಿ, ಶ್ರೀಮತಿ ಪ್ರಮೀಳಾ ವಂದಿಸಿದರು ಹಾಗೂ ಶ್ರೀಮತಿ ರೂಪಾಲಿ ಕಾರ್ಯಕ್ರಮವನ್ನು ನಿರೂಪಿಸಿದರು. ಹಿರಿಯ ವಿಭಾಗದ ವಾರ್ಷಿಕೋತ್ಸವದಂದು ಶ್ರೀಮತಿ ನಾಗಲಕ್ಷ್ಮಿ ಸ್ವಾಗತಿಸಿ, ಶ್ರೀಮತಿ ವಿಜೇತ ವಂದಿಸಿದರು ಹಾಗೂ ಶ್ರೀಮತಿ ಆ್ಯಲಿಸ್ ಲೋಬೋ ಕಾರ್ಯಕ್ರಮವನ್ನು ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page