27.2 C
Udupi
Tuesday, December 23, 2025
spot_img
spot_img
HomeBlogಕೋಳಿ ಅಂಕ ಪ್ರಾಣಿ ಹಿಂಸೆಯಾದರೆ ನೂರಾರು ಕುರಿ ಕಡಿಯುವವರ ಮೇಲು ಕ್ರಮ ಕೈಗೊಳ್ಳಬೇಕು : ಶಾಸಕ...

ಕೋಳಿ ಅಂಕ ಪ್ರಾಣಿ ಹಿಂಸೆಯಾದರೆ ನೂರಾರು ಕುರಿ ಕಡಿಯುವವರ ಮೇಲು ಕ್ರಮ ಕೈಗೊಳ್ಳಬೇಕು : ಶಾಸಕ ವೈ ಭರತ್ ಶೆಟ್ಟಿ ಆಕ್ರೋಶ

ಮಂಗಳೂರು: ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸ್ ನಿರ್ಬಂಧ ವಿಚಾರದಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದಾ ದಕ್ಷಿಣ ಕನ್ನಡ ಬಿಜೆಪಿ ಸಂಸದ ಹಾಗೂ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಡಾ. ವೈ ಭರತ್ ಶೆಟ್ಟಿ ಕೇಪು ಗ್ರಾಮದಲ್ಲಿ ಧಾರ್ಮಿಕ ಹಿನ್ನೆಲೆಯಲ್ಲಿ ನಡೆಯುವ ಕೋಳಿ ಅಂಕ ಪ್ರಾಣಿ ಹಿಂಸೆಯಾದಲ್ಲಿ ನೂರಾರು ಕುರಿ ಕಡಿಯುವವರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ ಅವರ ಸರ್ಕಾರದ ಮೇಲೆ ಹಿಡಿತವಿಲ್ಲ ಎಂದು ಅನಿಸುತ್ತದೆ. PREVENTION OF CRUELTY TO ANIMALS ACT, 1960 ಅಡಿ ಪ್ರಕರಣ ದಾಖಲಿಸುವುದಾದರೆ ಎಲ್ಲದರ ಮೇಲೂ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಇನ್ನು ಸಂಸದ ಬ್ರಿಜೇಶ್ ಚೌಟ ಮಾತನಾಡಿ ರಾಜ್ಯ ಸರ್ಕಾರವು ಹಿಂದೂಗಳ ಮೇಲೆ ದಮನಕಾರಿ ನೀತಿ ಅನುಸರಿಸುತ್ತಿದ್ದು ಯಕ್ಷಗಾನ, ಕಂಬಳ, ಕೋಳಿ ಅಂಕವನ್ನು ಆಡಳಿತದ ಮೂಲಕ ದಮನಿಸುವ ಪ್ರಯತ್ನ ನಡೆಸುತ್ತಿದೆ. ಇದು ಅತ್ಯಂತ ನಾಚಿಕೇಡು ಹಾಗೂ ಖಂಡನೀಯ. ಅಕ್ರಮ ನಡೆದರೆ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಜನರ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page