
ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಇತ್ತೀಚಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕೊವಾಕ್ಸಿನ್ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ನಡೆಸಿದ ಸಂಶೋಧನೆ ಕಳಪೆ ಎಂದು ಘೋಷಿಸಿದೆ.
ಐಸಿಎಂಆರ್ ಡೈರೆಕ್ಟರ್ ಜನರಲ್ ರಾಜೀವ್ ಬಹ್ಲ್ ಮಾತನಾಡಿ ಈ ಸಂಶೋಧನೆಗೆ ಯಾವುದೇ ಆರ್ಥಿಕ ಅಥವಾ ತಾಂತ್ರಿಕ ಬೆಂಬಲವನ್ನು ಒದಗಿಸಿಲ್ಲ. ಈ ಸಂಶೋಧನೆಯನ್ನು ಕಳಪೆಯಾಗಿ ತಯಾರಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಅಧ್ಯಯನ ವರದಿಯಲ್ಲಿ ಐಸಿಎಂಆರ್ ಹೆಸರನ್ನು ಬಳಸಿದ್ದನ್ನು ಕೂಡಲೇ ತೆಗೆದು ಹಾಕುವಂತೆ ಬಿಹೆಚ್‌ಯು ತಾಕೀತು ಮಾಡಿದೆ.