“ಹೆತ್ತವರು ನಮ್ಮ ಭವಿಷ್ಯದ ದಾರಿದೀಪ”- ಎನ್.ಆರ್. ದಾಮೋದರ ಶರ್ಮಾ

ಕುಕ್ಕುಂದೂರು : ಬಾಲ್ಯದಲ್ಲಿ ರೂಢಿಸಿಕೊಂಡ ಮೌಲ್ಯಗಳು ಮುಂದೆ ಸದ್ಗುಣಶೀಲ ಜೀವನವನ್ನು ನಡೆಸಲು ತಳಹದಿಯನ್ನು ರೂಪಿಸುತ್ತದೆ. ಯೋಗ್ಯ ಸಂಸ್ಕಾರಗಳನ್ನು ಕಲಿತ ವ್ಯಕ್ತಿಯು ಎಂದಿಗೂ ಕೆಟ್ಟವನಾಗಲಾರ, ಸಂಸ್ಕಾರಕ್ಕೆ ಅಂತಹ ಅದ್ಭುತಶಕ್ತಿ ಇದೆ.ವಿದ್ಯಾರ್ಥಿಗಳಾದ ತಾವೆಲ್ಲರೂ ಜಗತ್ತಿನಲ್ಲಿರುವ ಎಲ್ಲ ಒಳ್ಳೆಯ ವಿಷಯಗಳನ್ನು ಒಪ್ಪಿಕೊಂಡು ಬದುಕಿ. ಇಂದಿನಿಂದಲೇ, ಈ ಕ್ಷಣದಿಂದಲೇ ತಾಯಿ ತಂದೆಯವರೊಂದಿಗೆ ಗೌರವ, ಆದರದಿಂದ ವ್ಯವಹರಿಸಿ
ಎಂದು N.R. ದಾಮೋದರ ಶರ್ಮಾ ವಾಗ್ಮಿಗಳು ” ಶ್ರೀ ನವಾಕ್ಷರಿ ಬಾರಕೂರು ಹೇಳಿದರು.
ಅವರು ಕೆ. ಎಂ.ಇ. ಎಸ್. ಶಿಕ್ಷಣ ಸಂಸ್ಥೆಯಲ್ಲಿ ‘ಮೌಲ್ಯ ಕಿರಣ ‘ ಸಂಚಿಕೆಯ ‘ ಅಕ್ಕರೆಯಿಂದ ಅಕ್ಷರದೆಡೆಗೆ’ ಪ್ರಥಮ ಮಾಲಿಕೆ ಯನ್ನು ಉದ್ಘಾಟಿಸಿ ಮಾತಾನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರು ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸಿ ವಿದ್ಯಾರ್ಥಿಗಳು ಸರಿಯಾದ ಹಾದಿಯಲ್ಲಿ ನಡೆಯಲು ಸಂಸ್ಕಾರಯುತ ಶಿಕ್ಷಣ ಅತ್ಯವಶ್ಯಕ ಈ ಚಿಂತನೆಯೊಂದಿಗೆ ಕೆ. ಎಂ. ಇ. ಎಸ್ ಶಿಕ್ಷಣ ಸಂಸ್ಥೆಯು ಮೌಲ್ಯ ಕಿರಣ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಲೊಲಿಟಾ ಡಿಸಿಲ್ವ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಪಾಟ್ಕರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಪಾಟ್ಕರ್ ನಿರೂಪಿಸಿ, ಉಪನ್ಯಾಸಕಿಯರಾದ ಪೂಜಾ ಸ್ವಾಗತಿಸಿ ಸುಜಾತ ವಂದಿಸಿದರು.











