
ಕೆರ್ವಾಶೆ: ಗ್ರಾಮೀಣ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು ಸಭೆಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶಶಿಧರ್ ಕುಲಾಲ್, ಮಹಿಳಾ ಅಧ್ಯಕ್ಷರಾಗಿ ಸೌಮ್ಯ ನಾಯ್ಕ್ ಆಯ್ಕೆಯಾಗಿದ್ದಾರೆ.
ವಾರ್ಡ್ ಮಟ್ಟದಲ್ಲಿ ಶೆಟ್ಟಿಬೆಟ್ಟು ವಾರ್ಡ್ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ (ವಾರ್ಡ್ 01), ಬಂಗ್ಲೆ ಗುಡ್ಡೆ ವಾರ್ಡ್ ಅಧ್ಯಕ್ಷರಾಗಿ ವಿಠಲ ಪೂಜಾರಿ (ವಾರ್ಡ್ 02) ಮತ್ತು ಮೈನ್ ಸ್ಕೂಲ್ ವಾರ್ಡ್ ಅಧ್ಯಕ್ಷರಾಗಿ ಪ್ರಭು (ವಾರ್ಡ್ 03) ಆಯ್ಕೆಯಾಗಿದ್ದಾರೆ.






















































