
ಕಾರ್ಕಳ: ಹೊಸ ಯೋಜನೆಯೊಂದಿಗೆ ಕಾರ್ಕಳ ಟೈಗರ್ಸ್ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಸಂತಸದಾಯಕ. ಕಾರ್ಲೋತ್ಸವ ಕಾರ್ಯಕ್ರಮ ಕಾರ್ಕಳದಲ್ಲಿ ಶಾಶ್ವತವಾಗಿ
ಭದ್ರ ಭೂನಾದಿ ಪರಂಪರೆಯೊಂದಿಗೆ ಮುಂದುವರಿಯಲಿ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ ಹೇಳಿದರು.
ಅವರು ಶನಿವಾರ ಕಾರ್ಕಳ ಟೈಗರ್ಸ್ – ಬೋಳ ಪ್ರಶಾಂತ್
ಕಾಮತ್ ಅಭಿಮಾನಿ ಬಳಗ ಮತ್ತು ಬಾಯ್ ಜೋನ್ ಡ್ಯಾನ್ಸ್
ಅಕಾಡೆಮಿ ವತಿಯಿಂದ ಸ್ವರಾಜ್ಯ ಮೈದಾನದಲ್ಲಿ
ನಡೆಯುತ್ತಿರುವ ಕಾರ್ಲೋತ್ಸವದ ಎರಡನೇ ದಿನದ ಸಭಾ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬೋಳ ಪ್ರಶಾಂತ್ ಕಾಮತ್ ನೇತೃತ್ವದ ಕಾರ್ಕಳ ಟೈಗರ್ಸ್ ತಂಡವನ್ನು ಅಭಿನಂದಿಸಿದರು.
ನಿವೃತ್ತ ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್ ಅವರು ಶುಭಹಾರೆಸಿದರು.
ಸಮಾಜ ಸೇವಕ, ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಸುಂದರ ಬಿ.,
ನ್ಯಾಯವಾದಿ ವಿಫುಲ್ ತೇಜ್, ಹರೀಶ್ ಅಮೀನ್, ಫೆಲಿಕ್ಸ್ ವಾಸ್,
ಬಾಯ್ ಜೋನ್ ಡ್ಯಾನ್ಸ್ ಅಕಾಡೆಮಿಯ ಕಿಶೋರ್
ಉಪಸ್ಥಿತರಿದ್ದರು. ಸತೀಶ್ ಹೊಸ್ಮಾರು ಕಾರ್ಯಕ್ರಮ
ನಿರೂಪಿಸಿದರು.
ಮನೋರಂಜನಾ ಕಾರ್ಯಕ್ರಮದಲ್ಲಿ ಆಲ್ ಓಕೆ ಲೈವ್ ಇನ್
ಕಾನ್ಸರ್ಟ್, ಬಾಲಿವುಡ್‌ನ ಹೆಸರಾಂತ ಡಾನ್ಸರ್,
ಕೊರಿಯೋಗ್ರಾಫರ್ ಧರ್ಮೇಶ್ ಏಳಂಡೆ ಅವರಿಂದ ನೃತ್ಯ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಪ್ರತ್ಯರ್ಥ ಸಿನಿಮಾ
ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿತು.




