
ಕಾರ್ಕಳ: ಭೂಮಿ ಇರುವುದು ಎಲ್ಲರಿಗಾಗಿ. ಆದರೆ ನಾವು ಇದು ನಮ್ಮದೇ ಆಸ್ತಿ ಎಂದು ತಿಳಿದು ಕಾಡುಗಳನ್ನು ಕಡಿದು ಪ್ರಕೃತಿಯ ಸಮತೋಲನ ಕೆಡಿಸಿದ್ದೇವೆ. ಈ ತಪ್ಪನ್ನು ಸರಿಪಡಿಸಲು ನಮ್ಮದೊಂದು ಪುಟ್ಟ ಪ್ರಯತ್ನವೇ ನಮ್ಮ ನಡೆ ಅತ್ತೂರು ಪರ್ಪಲೆಗಿರಿ ಕಡೆ.
ಕಾರ್ಗಿಲ್ ಯುದ್ಧದ ಹುತಾತ್ಮ ಯೋಧರ ನೆನಪಿಗಾಗಿ, ಕಳೆದ ಮೂರು ಭಾನುವಾರಗಳಲ್ಲಿ ಪರ್ಪಲೆ ಗಿರಿಯ ಗುಹೆಯ ಪರಿಸರದಲ್ಲಿ ಐನೂರ ಇಪ್ಪತ್ತೇಳು ಗಿಡಗಳನ್ನು ನೆಟ್ಟು, ಇಂದು ದಿನಾಂಕ 28 ಜುಲೈ 2024 ರ ಭಾನುವಾರ ಪ್ರಕೃತಿ ಮಾತೆಗೆ ಸಮರ್ಪಿಸಿದ ಸಾರ್ಥಕತೆ ಸ್ವಚ್ಛ ಕಾರ್ಕಳ ಬ್ರಿಗೇಡ್ ಕಾರ್ಯಕರ್ತರದು.
ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಗಿಡಗಳನ್ನು ನೆಡುವ ಅಭಿಯಾನದ ಅಂಗವಾಗಿ ಚೇತಕ್ ಯುವಕ ಮತ್ತು ಯುವತಿ ಮಂಡಲ, ಶ್ರೀ ಅಂಬಾಭವಾನಿ ಗಾಲಿಮಾರಿ ಫ್ರೆಂಡ್ಸ್ ಕುಂಟಲ್ಪಾಡಿ, ರೋಟರಾಕ್ಟ್ ಕ್ಲಬ್ ಕಾರ್ಕಳ, ಅಭಿನವ ಭಾರತ ಕಾರ್ಕಳ, RPCA ಕಾರ್ಕಳ ಮತ್ತು ಸ್ಥಳೀಯರ ಸಹಕಾರದಿಂದ ಕಾರ್ಕಳದ ಅತ್ತೂರು ಪರ್ಪಲೆಗಿರಿಯ ಪರ್ಪಲೆಗುಹೆ ಪರಿಸರದಲ್ಲಿ ಸುಮಾರು 527 ಗಿಡಗಳನ್ನು ನೆಡಲಾಯಿತು.
ಸುಮಾರು 50 ಜನ ಸ್ವಯಂಸೇವಕರು ಈ 3 ಹಂತದ ಕಾರ್ಯದಲ್ಲಿ ಭಾಗವಹಿಸಿದ್ದರು











