
ಕಾರ್ಕಳ: ದೀಪಾವಳಿ ಹಬ್ಬದ ಪ್ರಯುಕ್ತ ಜೋಡುರಸ್ತೆಯ ಸ್ವರ್ಣ ಪ್ರಕಾಶ್ ಜುವೆಲ್ಲರ್ಸ್ ಸಂಸ್ಥೆಯು ಡಿ. 7ರಂದು ಆಯೋಜಿಸಿದ್ದ ಬೃಹತ್ ‘ಲಕ್ಕಿ ಕೂಪನ್ ಡ್ರಾ’ ಸಮಾರಂಭವು ಯಶಸ್ವಿಯಾಗಿ ನೆರೆದಿದ್ದು ಹಲವಾರು ಮಂದಿ ಅದೃಷ್ಟಶಾಲಿಗಳು ಆಕರ್ಷಕ ಉಡುಗೊರೆ ಓಚರ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಕಾಶ್ ಆಚಾರ್ಯ, ಶ್ರೀಮತಿ ಸ್ವಾತಿ ಪ್ರಕಾಶ್ ಆಚಾರ್ಯ, ಸೇವೆಂತ್ ಹೆವೆನ್ ಕೇಕ್ ಶಾಪ್ ಮಾಲಕ ಶ್ರೀ ಚರಣ್ ರೈ, ಸನ್ನಿ ಲೋಬೋ, ಶ್ರೀಮತಿ ಶ್ರುತಿ ಶೆಟ್ಟಿ ಹಾಗೂ ಇಂಜಿನಿಯರ್ ರೋಹನ್ ಆಚಾರ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಈ ಲಕ್ಕಿ ಡ್ರಾ ಸಮಾರಂಭದಲ್ಲಿ ಕಾರ್ಕಳದ ನವ್ಯ ಎಂಬವರು ಪ್ರಥಮ ಬಹುಮಾನವಾಗಿ ಬರೋಬ್ಬರಿ 1 ಲಕ್ಷ ರೂಪಾಯಿ ಮೌಲ್ಯದ ಗಿಫ್ಟ್ ವೋಚರ್ ಅನ್ನು ಪಡೆದಿದ್ದಾರೆ. ಜೋಡುರಸ್ತೆಯ ಸನ್ನಿಧಿ ಅವರು ದ್ವಿತೀಯ ಬಹುಮಾನವಾಗಿ 75,000 ಮೌಲ್ಯದ ಗಿಫ್ಟ್ ವೋಚರ್ ಪಡೆದಿದ್ದಾರೆ. ಮಧುರಾಜ್ ಶೆಟ್ಟಿ ಎಂಬವರು ತೃತೀಯ ಸ್ಥಾನ ಪಡೆದು 50 ಸಾವಿರ ಮೌಲ್ಯದ ಬಹುಮಾನವನ್ನು ಪಡೆದಿದ್ದಾರೆ. ಕಡ್ತಲದ ಶಶಿಕಲಾ ಎಂಬವರು ಚತುರ್ಥ ಸ್ಥಾನ ಪಡೆದು 25 ಸಾವಿರ ಮೌಲ್ಯದ ಗಿಫ್ಟ್ ಓಚರ್ ಪಡೆದಿದ್ದಾರೆ.
ಇದರ ಜೊತೆಗೆ ತಲಾ 10,000 ಮೌಲ್ಯದ 5 ವಿಶೇಷ ಗಿಫ್ಟ್ ವೋಚರ್ಗಳನ್ನು ಸಹ ನೀಡಿದ್ದು ಕಾರ್ಕಳ ಮಿಯಾರಿನ ಅಶ್ರಿತ, ಮೂಡುಬಿದರೆಯ ನವ್ಯಶ್ರೀ, ಯರ್ಲಪಾಡಿಯ ಸರಿತಾ, ಹಿರ್ಗಾನದ ಕುಮಾರ್ ಎಂ, ಕಾರ್ಕಳದ ದೂಪದಕಟ್ಟೆಯ ಸುಶಾಂತ್ ಸಂಗೀತ ಈ ವಿಜೇತರಲ್ಲಿ ಸೇರಿದ್ದಾರೆ.



















