
ಕಾರ್ಕಳದ ಹಿರಿಯ ಸಾಹಿತಿ ಸಾಮಾಜಿಕ ಕಾರ್ಯಕರ್ತೆ ತೆಳ್ಳಾರು ಪ್ರೌಢಶಾಲಾ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯಿನಿ ಭಾರತ ಸ್ಕೌಟ್ ಗೈಡ್ ರಾಷ್ಟ್ರೀಯ ತರಬೇತುದಾರರಾದ ಶ್ರೀಮತಿ ಸಾವಿತ್ರಿ ಮನೋಹರ್ ರವರ ನೂರಾರು ಪ್ರಶಸ್ತಿಗಳ ಜೊತೆಗೆ ಇದೀಗ ಕರುನಾಡ ಕವಿರತ್ನ ಪ್ರಶಸ್ತಿಯ ಗೌರವ ದೊರೆತಿದೆ.
ಕರುನಾಡ ಕಲ್ಪವೃಕ್ಷ ಫೌಂಡೇಶನ್ (ರಿ ) ಕರ್ನಾಟಕ.. ಚಿತ್ರದುರ್ಗ ಇವರು ದಿನಾಂಕ 7.12.2025 ರಂದು ಹಾವೇರಿಯಲ್ಲಿ ಹಮ್ಮಿಕೊಂಡ ಪ್ರಥಮ ಸಾಹಿತ್ಯ ಕಲ್ಪವೃಕ್ಷೋತ್ಸವ 2025-26 ಕಾರ್ಯಕ್ರಮದಲ್ಲಿ ಶ್ರೀಮತಿಯವರಿಗೆ ಅವರ ಶೈಕ್ಷಣಿಕ ಕ್ಷೇತ್ರ ಸಾಮಾಜಿಕ ಕ್ಷೇತ್ರ ಒಟ್ಟಿನಲ್ಲಿ ಸರ್ವ ಕ್ಷೇತ್ರದ ಸಾಧಕರಿಗೆ ನೀಡುವ ಕರುನಾಡ ಕವಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರಿಗೆ ಕನ್ನಡ ನಾಡು-ನುಡಿಯ ಬಗೆಗೆ ಇರುವ ಕಾಳಜಿ ಅವರ ಸಾಮಾಜಿಕ ಸೇವೆ ಸಮಾಜದ ದುರ್ಬಲರ ಏಳಿಗೆಗಾಗಿ ನಡೆಸಿದ ಶ್ರಮ ಒಟ್ಟಿನಲ್ಲಿ ಸಮಗ್ರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.





