ಮರ ಗಿಡಗಳನ್ನು ರಕ್ಷಿಸಿದರೆ, ಮುಂದಿನ ಪೀಳಿಗೆಗೆ ಜೀವಿಸಲು ಸಾಧ್ಯ: ರವೀಂದ್ರ ಪಿ.ಆಚಾರಿ

ಜೂನ್ 5:ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ಭುವನೇಂದ್ರ ರೆಸಿಡೆನ್ಷಿಯಲ್ ಶಾಲೆಯಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ವಲಯದ ಅರಣ್ಯಾಧಿಕಾರಿ ರವೀಂದ್ರ .ಪಿ .ಆಚಾರಿ ಮಾತನಾಡಿ, ಮರ-ಗಿಡಗಳನ್ನು ರಕ್ಷಿಸಿದರೆ ಮುಂದಿನ ಪೀಳಿಗೆ ಜೀವಿಸಲು ಸಾಧ್ಯ. ವರ್ಷಕ್ಕೊಂದು ಗಿಡವಾದರೂ ನೆಟ್ಟರೆ ಮುಂದಿನ ಪ್ರಪಂಚಕ್ಕೆ ಒಂದು ಕೊಡುಗೆಯಾಗುತ್ತದೆ ಹಾಗೂ ಮರ ಕಡಿಯುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ಶಾಲಾ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಭಾಷಣವನ್ನು ಮಾಡಿದರು ಹಾಗೂ ಪರಿಸರ ಗೀತೆಯನ್ನು ಹಾಡಿದರು

ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ಕೋಟ್ಯಾನ್ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿನಿ ಕುಮಾರಿ ಆದ್ಯ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪ ಸಂರಕ್ಷಣಾ ಅಧಿಕಾರಿಯಾದ ರವೀಂದ್ರ ಕುಮಾರ್, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಾದ ಸುರೇಶ್ ಗಾಣಿಗ, ಪುಟ್ಟಣ್ಣ ಗೌಡ, ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿಗಳು, ಪ್ರಾಂಶುಪಾಲರು , ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.





