ಕಾರ್ಕಳ ಬಾಹುಬಲಿ ಪ್ರವಚನ ಮಂದಿರ ಹಾಗೂ ಗೊಮ್ಮಟೇಶ್ವರ ಬೆಟ್ಟದಲ್ಲಿ ಯೋಗ ಕಾರ್ಯಕ್ರಮ

ಕಾರ್ಕಳ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ತನ್ನ ಎನ್.ಸಿ.ಸಿ.ಯೂನಿಟ್ ನ ಭೂದಳ, ನೌಕಾದಳವು ಉಡುಪಿಯ ಎಲ್.ಸಿ.ಸಿ.6 ನೇವಲ್ ಹಾಗೂ ಮಾಹೆ, ಮಣಿಪಾಲ ಅಲ್ಲದೆ ಕಾರ್ಕಳದ ಪುರಾತತ್ವ ಇಲಾಖೆಯ ಸಹಯೋಗದಲ್ಲಿ ಕಾರ್ಕಳದ ಬಾಹುಬಲಿ ಪ್ರವಚನ ಮಂದಿರ ಹಾಗೂ ಗೊಮ್ಮಟೇಶ್ವರ ಬೆಟ್ಟದಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಸಿ.ಡಿ.ಆರ್.ಅಶ್ವಿನ್ ರಾವ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಯೋಗದ ಮಹತ್ವ, ಯೋಗದಿಂದ ಶರೀರ ಮತ್ತು ಮನಸ್ಸುಗಳಿಗಾಗುವ ಉಪಯೋಗ ಹಾಗೂ ಅದನ್ನು ಮಾಡಬೇಕಾದ ಕ್ರಮಗಳ ಕುರಿತು ಮಾತನಾಡಿದರು.
ಪುರಾತತ್ವ ಇಲಾಖೆಯ ಸಮೀಕ್ಷಾಧಿಕಾರಿ ಜೆ.ಮಂಜುನಾಥ್, ಲೆಫ್ಟಿನೆಂಟ್ ದುಂಡೇಶ್ ಎಸ್.ಚಿನ್ನಾರ್, ಯೋಗ ಪ್ರೊಫೆಸರ್ ಡಾ.ಆತ್ಮಕಾ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಜಗದೀಶ್ ಹೆಗ್ಡೆ, ಎನ್.ಸಿ.ಸಿ.ನೇವಲ್ ಆಫೀಸರ್ ಮಹೇಶ್ ಪ್ರಭು, ಆರ್ಮಿ ಆಫೀಸರ್ ಕ್ಯಾಪ್ಟನ್ ಶ್ರೀಮೂರ್ತಿ ಉಪಸ್ಥಿತರಿದ್ದರು.
ಸುಮಾರು ನೂರು ಎನ್.ಸಿ.ಸಿ.ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಭ್ಯಾಸದ ಪ್ರಯೋಜನ ಪಡೆದರು.
















































