“ಯೋಗದಿಂದ ಆರೋಗ್ಯ ಆರೋಗ್ಯದಿಂದ ಸ್ವಸ್ಥ ರಾಷ್ಟ್ರ”: ಕುಮಾರಿ ತನುಶ್ರೀ ಪಿತ್ರೋಡಿ

ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ಡಿಸೆಂಬರ್ 4ರಂದು ತನು ಯೋಗ ಭೂಮಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಯೋಗಾಸನದ ಮುಖಾಂತರ 2 ಗಿನ್ನಸ್ ವರ್ಲ್ಡ್ ರೆಕಾರ್ಡ್ ಮತ್ತು 7 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹಾಗೂ ಭರತನಾಟ್ಯದ ಮುಖಾಂತರ ಒಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೀಗೆ ಒಟ್ಟು ಹತ್ತು ವರ್ಲ್ಡ್ ರೆಕಾರ್ಡನ್ನು ಮುಡಿಗೇರಿಸಿಕೊಂಡ ಅತ್ಯದ್ಭುತ ಪ್ರತಿಭೆ ಯೋಗ ಪಟು ನೃತ್ಯ ಹಾಗೂ ಸಂಗೀತ ಕಲಾವಿದೆ ಕುಮಾರಿ ತನುಶ್ರೀ ಪಿತ್ರೋಡಿಯವರು ನಮ್ಮ ದೇಶದ ಸಂಸ್ಕೃತಿ ಹಾಗೂ ರಾಷ್ಟ್ರ ಪ್ರೇಮವನ್ನು ಬಿಂಬಿಸುವ ಯೋಗ – ನೃತ್ಯ ಪ್ರದರ್ಶನ ದೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.ವರ್ಧಮಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ಕೆ ಹೆಗ್ಡೆ ಸರ್ವರನ್ನು ಸ್ವಾಗತಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಕರ್ತವ್ಯ ಜೈನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಕೃತಿಕಾ ರವರು ಧನ್ಯವಾದಗಳು.



















