
ವರ್ಧಮಾನ ಪೂರ್ವ ಪ್ರಾಥಮಿಕ ಶಾಲಾ ಪುಟಾಣಿಗಳಿಂದ ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು.
ಜೆಸಿಐ ಅಧ್ಯಕ್ಷೆ ಶ್ವೇತಾ. ಎಸ್. ಜೈನ್ ರವರು ಕ್ರೀಡಾಕೂಟವನ್ನು ದೀಪ ಪ್ರಜ್ವಲಿಸುವ ಮುಖಾಂತರ ಚಾಲನೆಯನ್ನು ನೀಡಿ, ಪುಟಾಣಿಗಳ ಮುಗ್ಧ ಮನಸ್ಸಿನಲ್ಲಿ ಕ್ರೀಡೆಯ ಆಸಕ್ತಿಯನ್ನು ಮೂಡಿಸುವಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನಾರ್ಹ ಎಂದು ವರ್ಧಮಾನ ಸಂಸ್ಥೆಯ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದರು.
ಮಕ್ಕಳು ಓಟ, ಕಪ್ಪೆ ಜಿಗಿತ, ಹರ್ಡಲ್ಸ್ ಬ್ಯಾಲೆನ್ಸಿಂಗ್ ಆಟ ಏಕಾಗ್ರತೆಯ ಆಟವನ್ನಾಗಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಶಶಿಕಲಾ. ಕೆ. ಹೆಗ್ಡೆ ಸ್ವಾಗತಿಸಿ, ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಆಡಳಿತ ಅಧಿಕಾರಿ ಕರ್ತವ್ಯ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಶಾಲಾ ಶಿಕ್ಷಕ ವೃಂದದವರಾದ ಸಂದೇಶ್, ಆಶಾ ಕಾಮತ್, ಸೀಮಾ ಕಾಮತ್, ಗ್ರೀಷ್ಮ ಅನಿತಾ, ಸುಲತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






















































