
ಜುಲೈ 24. ರಂದು ಕಾರ್ಕಳ ಯೋಜನಾ ಕಚೇರಿಯಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲ್ಲೂಕಿನ ಜ್ಞಾನದೀಪ ಶಿಕ್ಷಕ ರ ಸಭೆ ಯನ್ನು ಕೇಂದ್ರ ಕಚೇರಿ ಯ ಸಮುದಾಯ ವಿಭಾಗದ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಆನಂದ ಸುವರ್ಣ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾಹಿತಿ ನೀಡಿದರು.
ಈ ಸಂದರ್ಭ ಕಾರ್ಕಳ ತಾಲೂಕಿನ ಕ್ಷೇತ್ರ ಪರಿವಿಕ್ಷನಾಧಿಕಾರಿ ರವಿಚಂದ್ರ ಕಾರಂತ್,ಯೋಜನಾಧಿಕಾರಿ ಹೇಮಲತಾ, ಸಮುದಾಯ ವಿಭಾಗದ ಯೋಜನಾಧಿಕಾರಿ ಸುರೇಶ್, ಹಣಕಾಸು ಪ್ರಭಂದಕರು ಜಯೇಂದ್ರ ರವರು ಹಾಜರಾಗಿದ್ದರು.
2 ತಾಲೂಕಿನ 38 ಜ್ಞಾನದೀಪ ಶಿಕ್ಷಕರು ಈ ಸಭೆ ಯಲ್ಲಿ ಉಪಸ್ಥಿತರಿದ್ದರು.
ಪೂಜ್ಯ ಕಾವಂದರ ಕನಸಿನ ಕೂಸು ಈ ಸಮುದಾಯದ ವಿಭಾಗದಲ್ಲಿ ಹಲವು ಸಮುದಾಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಎಲ್ಲಾ ಜ್ಞಾನ ನದೀಪ ಶಿಕ್ಷಕರು ಆದರ್ಶ ಶಿಕ್ಷಕಿಯಾಗಿ ಬದುಕಬೇಕೆಂದು ಮಾಹಿತಿ ನೀಡಿದರು.











