
2027ರ ಫೆಬ್ರವರಿಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ 12 ವರ್ಷಕ್ಕೊಮ್ಮೆ ನಡೆಯುವ ನಿಟ್ಟಿನಲ್ಲಿ ಕಾರ್ಕಳ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರೂ. 77.87 ಕೋಟಿ ವಿಶೇಷ ಅನುದಾನವನ್ನು ಕರ್ನಾಟಕ ಸರಕಾರದ ವತಿಯಿಂದ ಬಿಡುಗಡೆಗೊಳಿಸುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಹಾಮಸ್ತಕಾಭಿಷೇಕದ ಕಾರ್ಯಧ್ಯಕ್ಷರಾದ ಡಾ. ಎಂ. ಎನ್ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪುಷ್ಪರಾಜ್ ಜೈನ್ ,ಸದಾಶಿವ ಉಳ್ಳಾಲ ಮೂಡ ಅಧ್ಯಕ್ಷರು, ಮೇಘರಾಜ್ ಜೈನ್,ಸುನಿಲ್ ಕುಮಾರ್ ಬಜಗೋಳಿ, ವೃಷಭದೇವ ಅಧಿಕಾರಿ ಉಪಸ್ಥಿತರಿದ್ದರು.



















